

ಜೈಪುರ: ಅತ್ಯಾಚಾರ ಸಂತ್ರಸ್ತೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ರಾಜಸ್ತಾನದ ಮಹಿಳಾ ಆಯೋಗದ ಸದಸ್ಯೆ ಸೌಮ್ಯಾ ಗುರ್ಜರ್ ರಾಜೀನಾಮೆ ನೀಡಿದ್ದಾರೆ.
ಅತ್ಯಾಚಾರ ಸಂತ್ರಸ್ತೆಯನ್ನು ಭೇಟಿ ಮಾಡಲು ಜೈಪುರದ ಉತ್ತರಭಾಗದಲ್ಲಿರುವ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಗೆ ಮಹಿಳಾ ಆಯೋಗದ ಅಧ್ಯಕ್ಷೆಯೊಂದಿಗೆ ಭೇಟಿ ನೀಡಿದ್ದ ಗುರ್ಜರ್, ಆಯೋಗದ ಅಧ್ಯಕ್ಷೆ ಸುಮನ್ ಶರ್ಮಾ ಪೊಲೀಸರಿಂದ ವಿವರಣೆ ಪಡೆಯುತ್ತಿದ್ದ ವೇಳೆ ಸಂತ್ರಸ್ತೆ ಜತೆ ಸೆಲ್ಫಿ ತೆಗೆದುಕೊಂಡಿದ್ದರು.
ಸಂವೇದನೆಯನ್ನು ಮರೆತು ಕ್ಲಿಕ್ಕಿಸಿಕೊಂಡಿದ್ದ ಸೆಲ್ಫಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಆಕ್ರೋಶ ವ್ಯಕ್ತವಾದ ಪರಿಣಾಮ ಮಹಿಳಾ ಆಯೋಗದ ಸದಸ್ಯ ಸ್ಥಾನಕ್ಕೆ ಸೌಮ್ಯಾ ಗುರ್ಜರ್ ರಾಜೀನಾಮೆ ನೀಡಿದ್ದಾರೆ. ಗುರ್ಜರ್ ರಾಜೀನಾಮೆ ನೀಡುವುದಕ್ಕೂ ಮುನ್ನವೇ ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಹಿಳಾ ಆಯೋಗದ ಅಧ್ಯಕ್ಷೆ ಸುಮನ್ ಶರ್ಮಾ ಸೌಮ್ಯ ಗುರ್ಜರ್ ಗೆ ವಿವರಣೆ ನೀಡುವಂತೆ ಸೂಚಿಸಿದ್ದರು.