

ಮುಂಬೈ: 22 ವರ್ಷದ ಹೃದಯ ರೋಗಿ ಯುವಕನ ಪ್ರಾಣ ಉಳಿಸಲು ಇಂದೋರ್ ನಿಂದ ಮುಂಬೈಗೆ ಕೇವಲ 116 ನಿಮಿಷಗಳಲ್ಲೇ ಜೀವಂತ ಹೃದಯ ರವಾನೆ ಮಾಡಲಾಗಿದೆ.
ಖಾಸಗಿ ಮತ್ತು ಸರ್ಕಾರಿ ಏಜೆನ್ಸಿಗಳ ನಿಖರ ಮತ್ತು ಕರಾರುವಕ್ಕಾದ ಯೋಜನೆಯಿಂದ ಮುಂಬೈನ ಮುಲುಂದ್ ನ ಪೋರ್ಟಿಸ್ ಆಸ್ಪತ್ರೆಯ ವೈದ್ಯರು ಈ ಸಾಹಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ.
ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದ ಇಂದೋರ್ ನ 20 ವರ್ಷದ ಯುಕನ ಹೃದಯವನ್ನು ಒಡಿಶಾದ ಮೂಲದ ಯುವಕನಿಗೆ ಹೃದಯ ಕಸಿ ಮಾಡಲಾಗಿದೆ.