ನವದೆಹಲಿ: ಮಾರ್ಚ್ 8 ರಂದು ಐಸಿಸಿ ವಿಶ್ವಕಪ್ ಟಿ 20 ಕ್ರಿಕೆಟ್ ಪಂದ್ಯ ಆರಂಭವಾಗಲಿದ್ದು, ಈ ಪ್ರಯುಕ್ತ ಸೋಮವಾರ ಗೂಗಲ್ ವಿಶೇಷ ಡೂಡಲ್ ಮಾಡಿ ಗಮನ ಸೆಳೆದಿದೆ.
ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಟಗಾರರು ಆಡುತ್ತಿರುವ ಪಕ್ಷಿ ನೋಟವನ್ನು ಗೂಗಲ್ ಡೂಡಲ್ ಮಾಡಿದೆ. ಐಸಿಸಿ ವಿಶ್ವಕಪ್ ಟಿ20ಯ ಆರನೇ ಆವೃತ್ತಿ ಇದೇ ಮೊದಲ ಬಾರಿ ಭಾರತದಲ್ಲಿ ನಡೆಯುತ್ತಿರುವುದು ವಿಶೇಷ
ಭಾರತದ ಏಳು ನಗರಗಳಲ್ಲಿ ಈ ಪಂದ್ಯಗಳ ನಡೆಯಲಿದ್ದು, ಫೈನಲ್ ಪಂದ್ಯ ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿದೆ.