ಗಂಡು ಮಗುವಿಗೆ ಜನ್ಮ ನೀಡಿದ ಮೊದಲ ಪ್ರಣಾಳ ಶಿಶು ಹರ್ಷಾ

30 ವರುಷಗಳ ಹಿಂದೆ ಮುಂಬೈನಲ್ಲಿ ಮೊದಲ ಪ್ರಣಾಳ ಶಿಶು ಹರ್ಷಾಳ ಜನನವಾಗಿತ್ತು. ಆ ಹರ್ಷಾ ಸೋಮವಾರ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ...
ಮಗುವಿನೊಂದಿಗೆ ಹರ್ಷಾ
ಮಗುವಿನೊಂದಿಗೆ ಹರ್ಷಾ
ಮುಂಬೈ: 30 ವರುಷಗಳ ಹಿಂದೆ ಮುಂಬೈನಲ್ಲಿ ಮೊದಲ ಪ್ರಣಾಳ ಶಿಶು ಹರ್ಷಾಳ ಜನನವಾಗಿತ್ತು. ಆ ಹರ್ಷಾ ಸೋಮವಾರ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಮುಂಬೈಯ ಜಸ್‌ಲೋಕ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹರ್ಷಾ ಶಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಡಾ. ಇಂದಿರಾ ಹಿಂದೂಜ ಮತ್ತು ಡಾ ಕುಸುಮ್ ಜವೇರಿ ಅವರ ಸಹಾಯದಿಂದ ಈ ಸಿಸೇರಿಯನ್ ನಡೆದಿದೆ. 
ಐವಿಎಫ್ ಮೂಲಕ ಜನಿಸಿದ (ಪ್ರಣಾಳ ಶಿಶು) ಮಗು ಮುಂದೆ ಬೆಳೆದು ದೊಡ್ಡವಳಾಗಿ ಮಗುವಿಗೆ ಜನ್ಮ ನೀಡಲು ಸಾಧ್ಯವೆ? ಎಂಬ ಪ್ರಶ್ನೆ ಹಲವರಿಗಿದೆ. ಆದರೆ ಪ್ರಣಾಳ ಶಿಶು ಕೂಡಾ ಸಾಧಾರಣ ಮಗುವಿನಂತೆ ಬೆಳೆದು ಮಗುವಿಗೆ ಜನ್ಮ ನೀಡಬಲ್ಲುದು ಎಂಬುದಕ್ಕೆ ಹರ್ಷಾ ಉದಾಹರಣೆ ಎಂದು ಐವಿಎಫ್ ತಜ್ಞರೊಬ್ಬರು ಹೇಳಿದ್ದಾರೆ.
ಹರ್ಷಾ ಅವರ ಮಗು ಆರೋಗ್ಯವಾಗಿದ್ದು,  3.1 ಕೆಜಿಯಷ್ಟು ತೂಕ ಹೊಂದಿದೆ ಎಂದು ವೈದ್ಯರು ಹೇಳಿದ್ದಾರೆ .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com