ದೇಶ

ರಾಹುಲ್ ಗೆ ಮಕ್ಕಳಿದಿದ್ದರೆ ದೇಶದ್ರೋಹ ಗುಂಪಿಗೆ ಸೇರುತ್ತಿದ್ದರು: ಬಿಜೆಪಿ ಮುಖಂಡ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮದುವೆಯಾಗಿ ಮಕ್ಕಳಾಗಿದ್ದರೆ, ಆ ಮಕ್ಕಳು ದೇಶದ್ರೋಹಿಗಳ ಗುಂಪಿಗೆ...

ರಾಹುಲ್ ಗೆ ಮಕ್ಕಳಿದಿದ್ದರೆ ದೇಶದ್ರೋಹ ಗುಂಪಿಗೆ ಸೇರುತ್ತಿದ್ದರು: ಬಿಜೆಪಿ ಮುಖಂಡ
ರಾಹುಲ್ ಗಾಂಧಿ
Published On :
ಸೂರತ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮದುವೆಯಾಗಿ ಮಕ್ಕಳಾಗಿದ್ದರೆ, ಆ ಮಕ್ಕಳು ದೇಶದ್ರೋಹಿಗಳ ಗುಂಪಿಗೆ ಸೇರುತ್ತಿದ್ದರು ಎಂದು ಬಿಜೆಪಿಯ ನಾಯಕ ಓಂ ಮಾಥುರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸೂರತ್ ನಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಸದ್ಯ ರಾಹುಲ್ ಗಾಂಧಿ ಮದುವೆಯಾಗಿಲ್ಲ, ಇಲ್ಲದಿದ್ದರೆ, ಮದುವೆಯಾಗಿ ಮಕ್ಕಳಿದಿದ್ದರೇ, ಅವರು ದೇಶದ್ರೋಹ ಗುಂಪಿಗೆ ಸೇರುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ. 
ನಾಲ್ಕು ತಲೆಮಾರುಗಳಿಂದ ಒಂದೇ ಕುಟುಂಬ ದೇಶವನ್ನು ಆಳಿದೆ. ಕಾಂಗ್ರೆಸ್ ನವರಿಗೆ ಒಂದೇ ಕುಟುಂಬದ ಆಳ್ವಿಕೆಯಲ್ಲಿಯೇ ಹೆಚ್ಚು ವಿಶ್ವಾಸ ಎಂದ ಅವರು, ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಂಡು ನಿರಾಶೆಯಲ್ಲಿದೆ. ಹಾಗಾಗಿ, ಇಲ್ಲಸಲ್ಲದ ವಿಷಯಗಳ ಬಗ್ಗೆ ಕ್ಯಾತೆ ತೆಗೆಯುತ್ತಿದೆ ಎಂದು ಆರೋಪಿಸಿದ್ದಾರೆ. 
ರಾಷ್ಟ್ರ ವಿರೋಧಿ ಅಂಶಗಳನ್ನು ಬೆಂಬಲಿಸಿ ಅಂದು ರಾಹುಲ್ ಗಾಂಧಿ ಜೆಎನ್ ಯುಗೆ ತೆರಳಿದ್ದರು. ಹಾಗಾಗಿ, ಮೊದಲು ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಮಾಥುರ್ ಒತ್ತಾಯಿಸಿದ್ದಾರೆ. 
ಮಾಥುರ್ ಹೇಳಿಕೆಯನ್ನು ಖಂಡಿಸಿರುವ ಗುಜರಾತ್ ಕಾಂಗ್ರೆಸ್ ಮುಖಂಡ ಜಯರಾಜ್ ಸಿನ್ಹಾ, ಮಾಥುರ್ ಹೇಳಿಕೆ ಕೀಳು ಮಟ್ಟದಾಗಿದೆ ಎಂದು ಕಿಡಿ ಕಾರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.