ಒಡಿಶಾದಲ್ಲಿ 57 ಮಾವೋವಾದಿಗಳ ಬೆಂಬಲಿಗರ ಶರಣಾಗತಿ

ಒಡಿಶಾದಲ್ಲಿ 57 ಮಾವೋವಾದಿಗಳ ಬೆಂಬಲಿಗರು ಪೊಲೀಸರಿಗೆ ಶರಣಾಗಿದ್ದು ಕಳೆದ ಒಂದು ವಾರದಲ್ಲಿ ಪೊಲೀಸರಿಗೆ ಶರಣಾಗಿರುವ ಮಾವೋವಾದಿಗಳ ಸಂಖ್ಯೆ 315 ಕ್ಕೆ ಏರಿಕೆಯಾಗಿದೆ.
ಒಡಿಶಾದಲ್ಲಿ 57 ಮಾವೋವಾದಿಗಳ ಬೆಂಬಲಿಗರ ಶರಣಾಗತಿ (ಸಾಂಕೇತಿಕ ಚಿತ್ರ)
ಒಡಿಶಾದಲ್ಲಿ 57 ಮಾವೋವಾದಿಗಳ ಬೆಂಬಲಿಗರ ಶರಣಾಗತಿ (ಸಾಂಕೇತಿಕ ಚಿತ್ರ)

ಭುವನೇಶ್ವರ್: ಒಡಿಶಾದಲ್ಲಿ 57 ಮಾವೋವಾದಿಗಳ ಬೆಂಬಲಿಗರು ಪೊಲೀಸರಿಗೆ ಶರಣಾಗಿದ್ದು ಕಳೆದ ಒಂದು ವಾರದಲ್ಲಿ ಪೊಲೀಸರಿಗೆ ಶರಣಾಗಿರುವ ಮಾವೋವಾದಿಗಳ ಸಂಖ್ಯೆ 315 ಕ್ಕೆ ಏರಿಕೆಯಾಗಿದೆ.
ಪೊಲೀಸರಿಗೆ ಶರಣಾಗಿರುವ 57 ಮಾವೋವಾದಿಗಳ ಬೆಂಬಲಿಗರು ಮಲ್ಕಂಗಿರಿ ಜಿಲ್ಲೆಯ ಗ್ರಾಮದವರಾಗಿದ್ದಾರೆ.  "ಒಂದು ವಾರದಿಂದ 315 ಮಾವೋವಾದಿಗಳ ಬೆಂಬಲಿಗರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಪೊಲೀರಿಗೆ ಶರಣಾಗಿದ್ದಾರೆ ಎಂದು ಎಸ್ ಪಿ ಮಿತ್ರಭಾನು ಮಹಾಪಾತ್ರ ಹೇಳಿದ್ದಾರೆ.
ಪೊಲೀಸರೆದುರು ಶರಣಾಗಿರುವ ಮಾವೋವಾದಿಗಳಿಗೆ ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ಪುನರ್ವಸತಿ ಕಲ್ಪಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com