ವಿಶ್ವ ಸೂಫಿ ವೇದಿಕೆ: ಪ್ರಧಾನಿಯನ್ನು ಸ್ವಾಗತಿಸುವ ವೇಳೆ ಮೊಳಗಿದ 'ಭಾರತ್ ಮಾತಾ ಕಿ ಜೈ ಘೋಷಣೆ'!

ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಸೂಫಿ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವ ವೇಳೆ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಮೊಳಗಿದೆ.
ವಿಶ್ವ ಸೂಫಿ ವೇದಿಕೆಯಲ್ಲಿ ಮೋದಿ ಸ್ವಾಗತದ ವೇಳೆ ಮೊಳಗಿದ ಭಾರತ್ ಮಾತಾ ಕಿ ಜೈ ಘೋಷಣೆ!
ವಿಶ್ವ ಸೂಫಿ ವೇದಿಕೆಯಲ್ಲಿ ಮೋದಿ ಸ್ವಾಗತದ ವೇಳೆ ಮೊಳಗಿದ ಭಾರತ್ ಮಾತಾ ಕಿ ಜೈ ಘೋಷಣೆ!

ನವದೆಹಲಿ: ಮಜ್ಲಿಸ್‌-ಎ-ಇತ್ತೆಹಾದುಲ್‌ ಮುಸ್ಲಿಮೀನ್‌ (ಎಂಐಎಂ) ಮುಖಂಡ ಅಸಾವುದ್ದೀನ್ ಒವೈಸಿ ಭಾರತ್ ಮಾತಾಕಿ ಜೈ ಎಂಬ ಘೋಷಣೆ ಕೂಗುವುದಿಲ್ಲ ಎಂದಿದ್ದರು. ಆದರೆ ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಸೂಫಿ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವ ವೇಳೆ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಮೊಳಗಿದೆ.

ವಿಶ್ವ ಸೂಫಿ ಫೋರಂನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿ ವೇದಿಕೆ ಏರುತ್ತಿದ್ದಂತೆಯೇ ನೆರೆದಿದ್ದ ಜನಸಮೂಹ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದೆ. ಪ್ರಧಾನಿ ವೇದಿಕೆ ಏರಿದಾಗ ಪ್ರಾರಂಭವಾದ ಭಾರತ್ ಮಾತಾ ಕಿ ಜೈ ಘೋಷಣೆ ಮೋದಿ ಭಾಷಣ ಪ್ರಾರಂಭವಾಗುವವರೆಗೂ ಕೇಳಿಸುತ್ತಿತ್ತು.  

ಕುತ್ತಿಗೆ ಮೇಲೆ ಕತ್ತಿಯಿಟ್ಟರೂ ನಾನು ಭಾರತ್ ಮಾತಾ ಕಿ ಜೈ ಎಂದು ಹೇಳಲ್ಲ ಎಂದು ಎಂಐಎಂ ಮುಖಂದ ಅಸಾವುದ್ದೀನ್ ಒವೈಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದರೆ ಇದಕ್ಕೆ  ತದ್ವಿರುದ್ಧವೆಂಬಂತೆ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ವಿಶ್ವ ಸೂಫಿ ಫೋರಂ ನಲ್ಲಿ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಮೊಳಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com