ಕ್ಯಾಪ್ಟನ್ ಅಮರಿಂದರ್ ಸಿಂದ್ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ: ರಾಹುಲ್

2017 ರಲ್ಲಿ ನಡೆಯುವ ಪಂಜಾಬಿ ವಿಧಾನಸಭೆ ಚುನಾವಣೆಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ..
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ಚಂಡೀಘಡ: 2017 ರಲ್ಲಿ ನಡೆಯುವ ಪಂಜಾಬಿ ವಿಧಾನಸಭೆ ಚುನಾವಣೆಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸುಳಿವು ನೀಡಿದ್ದಾರೆ.

ಅಮೃತಸರದಲ್ಲಿ ಮಾದಕ ವ್ಯಸನದ ಬಗ್ಗೆ ಏರ್ಪಡಿಸಿದ್ದ ಸಿನಿಮಾ ಪ್ರದರ್ಶನ ವೀಕ್ಷಿಸಿ ಮಾತನಾಡಿದ ಅವರು, ಪಂಜಾಬ್ ನಲ್ಲಿ ಡ್ರಗ್ ಮಾಫಿಯಾ ತಳ ಮಟ್ಟದಿಂದ ಬೇರೂರಿದೆ. ಇದಕ್ಕೆ ರಾಜ್ಯ ಸರ್ಕಾರ, ಪೊಲೀಸರು ಮತ್ತು ಡ್ರಗ್ಸ್ ಕಳ್ಳಸಾಗಣೆದಾರರ ನಡುವಿನ ಒಪ್ಪಂದ ಕಾರಣ ಎಂದು ಅವರು ಆರೋಪಿಸಿದ್ದಾರೆ,

ಮಾದಕ ವಸ್ತುಗಳ ವಿರುದ್ಧ ನಡೆಯುತ್ತಿರುವ ಹೋರಾಟ ಕೇವಲ ಕಾಂಗ್ರೆಸ್ ಹೋರಾಟ ಆಗಬಾರದು. ಇಡೀ ಪಂಜಾಬ್ ನ ಯುವ ಸಮುದಾಯ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ರಾಹುಲ್ ಗಾಂಧಿ ಕರೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com