ನಮ್ಮ ಒಗ್ಗಟ್ಟು ಒಡೆಯಬಹುದೆಂದು ಆರ್'ಎಸ್ಎಸ್, ಸರ್ಕಾರ ಚಿಂತಿಸಿತ್ತು: ಉಮರ್ ಖಾಲಿದ್

ಆರ್'ಎಸ್ಎಸ್ ಹಾಗೂ ಸರ್ಕಾರ ನಮ್ಮಲ್ಲಿರುವ ಧೈರ್ಯ ಹಾಗೂ ಒಗ್ಗಟ್ಟನ್ನು ಸುಲಭವಾಗಿ ಒಡೆದು ಹಾಕಬಹುದೆಂದು ಚಿಂತಿಸುತ್ತಿದೆ. ಆದರೆ, ಆ ಆಲೋಚನೆ ತಪ್ಪು ಎಂದು ಜೆಎನ್ ಯು ಪ್ರಕರಣಕ್ಕೆ...
ಉಮರ್ ಖಾಲಿದ್
ಉಮರ್ ಖಾಲಿದ್
Updated on: 

ನವದೆಹಲಿ: ಆರ್'ಎಸ್ಎಸ್ ಹಾಗೂ ಸರ್ಕಾರ ನಮ್ಮಲ್ಲಿರುವ ಧೈರ್ಯ ಹಾಗೂ ಒಗ್ಗಟ್ಟನ್ನು ಸುಲಭವಾಗಿ ಒಡೆದು ಹಾಕಬಹುದೆಂದು ಚಿಂತಿಸಿತ್ತು. ಆದರೆ, ಆ ಆಲೋಚನೆ ತಪ್ಪು ಎಂದು ಜೆಎನ್ ಯು ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಪಡೆದು ಬಿಡುಗಡೆ ಹೊಂದಿರುವ ಉಮರ್ ಖಾಲಿದ್ ಹೇಳಿಕೊಂಡಿದ್ದಾರೆ.

ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ರಾಷ್ಟ್ರದ್ರೋಹ ಪ್ರಕರಣದ ಮೇಲೆ ಜೈಲು ಸೇರಿದ್ದ ಉಮರ್ ಖಾಲಿದ್ ಹಾಗೂ ಅನಿರ್ಬಾನ್ ಭಟ್ಟಾಚಾರ್ಯ ಇಬ್ಬರು ವಿದ್ಯಾರ್ಥಿಗಳು ನಿನ್ನೆಯಷ್ಟೇ ಜಾಮೀನು ಪಡೆದು ಬಿಡುಗಡೆಯಾಗಿದ್ದರು.

ಬಿಡುಗಡೆಗೊಂಡ ಬಳಿಕ ಮೊದಲ ಬಾರಿಗೆ ಜೆಎನ್ ಯು ವಿವಿ ಆವರಣದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿರುವ ಖಾಲಿದ್, ನಾನು ಮುಸ್ಲಿಮನೆಂದು ಹೇಳಿಕೊಂಡು ನನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನಿಸಲಿಲ್ಲ. ಆದರೆ, ಜೈಲಿನಲ್ಲಿ ನನ್ನನ್ನು ಇಸಿಸ್ ಉಗ್ರನಂತೆ ನೋಡುತ್ತಿದ್ದರು. ಆರ್ ಎಸ್ಎಸ್ ಹಾಗೂ ಸರ್ಕಾರ ನಮ್ಮಲ್ಲಿರುವ ಒಗ್ಗಟ್ಟು ಹಾಗೂ ಧೈರ್ಯವನ್ನು ಸುಲಭವಾಗಿ ಒಡೆದು ಹಾಕಬಹುದೆಂದು ಚಿಂತಿಸುತ್ತಿದೆ. ಆದರೆ, ಆರ್ ಎಸ್ಎಸ್ ಹಾಗೂ ಸರ್ಕಾರಕ್ಕೆ ಒಂದನ್ನು ಹೇಳಲು ಬಯಸುತ್ತೇನೆ. ನೀವೇನು ಚಿಂತಿಸುತ್ತಿದ್ದೀರೋ ಆ ಆಲೋಚನೆ ತಪ್ಪು. ಆದು ಎಂದಿಗೂ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ನನ್ನ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಾಗಿದ್ದಕ್ಕೆ ನನಗೆ ಯಾವುದೇ ದುಃಖವಾಗಲಿ, ನೋವಾಗಲಿ ಇಲ್ಲ. ನಮ್ಮ ಕಾನೂನಿನಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಯೋಧರು ಹೆಸರನ್ನು ಸೇರಿಸಲಾಗಿತ್ತು ಹಾಗೆ ನೋಡಿದರೆ ಇಂತಹ ಮಹಾನ್ ಯೋಧರ ನಡುವೆ ನಮ್ಮ ಹೆಸರು ಸೇರಿಕೊಂಡಿದೆ.

ಯಾರು ಆಡಳಿತ ವರ್ಗದ ಕಡೆಯಿರುತ್ತಾರೋ ಅವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಇರುವುದಿಲ್ಲ. ನಾನು ಮುಸ್ಲಿಮನೆಂದು ಹೇಳಿಕೊಂಡು ನನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನವನ್ನು ನಾನು ಮಾಡಲಿಲ್ಲ. ಆದರೆ, ಜೈಲಿನಲ್ಲಿ ನಮ್ಮನ್ನು ಇಸಿಸ್ ಉಗ್ರರಂತೆ ನಡೆಸಿಕೊಳ್ಳಲಾಗುತ್ತಿತ್ತು. ಒಂದು ರೀತಿಯಲ್ಲಿ ಹೇಳಬೇಕಾದರೆ, ಇಡೀ ಮುಸ್ಲಿಂ ಸಮುದಾಯವೇ ವಿಚಾರಣೆಗೊಳಪಟ್ಟಿದೆ ಎಂಬಂತಿತ್ತು. ಕೆಲವು ಮೂಲಭೂತವಾದಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ನಮ್ಮ ಸರ್ಕಾರ ದಲಿತ ವಿರೋಧಿಗಳು, ಬುಡಕಟ್ಟು ವಿರೋಧಿಗಳು ಹಾಗೂ ಮಾನವತಾವಾದಿಗಳ ವಿರೋಧಿಗಳ ಪರವಾಗಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com