

ನವದೆಹಲಿ: ಭಾರತೀಯ ಸೇನೆ ಮೇಲೆ ದಾಳಿಗೆ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂಬ ಸ್ಫೋಟಕ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.
ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಕಾಶ್ಮೀರ ಮುಖ್ಯಸ್ಥ ಅಬು ದುಜಾನ ನೇತೃತ್ವದಲ್ಲಿ 10 ಮಂದಿ ಉಗ್ರರು ಭಾರತೀಯ ಸೇನೆ ಮೇಲೆ ದಾಳಿ ನಡೆಸಲು ತಯಾರಿ ನಡೆಸಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಎಲ್ಇಟಿ ಉನ್ನತ ನಾಯಕರ ಜತೆ ದುಜಾನ ನಡೆಸಿದ ಟೆಲಿಫೋನ್ ಕರೆ ಸಂಭಾಷಣೆಯಲ್ಲಿ ದಾಳಿ ನಡೆಸುವಂತೆ ಲಷ್ಕರ್ಗೆ ಸೂಚನೆ ನೀಡಲಾಗಿದೆ.
ಇನ್ನು ಬಿಎಸ್ಎಫ್ ಯೋಧರ ಮೇಲೆ ದಾಳಿ ಮಾಡಿ ಅವರ ಬಳಿ ಇರುವ ಶಸ್ತ್ರಾಸ್ತ್ರಗಳ ಲೂಟಿ ಮಾಡಿದವರಿಗೆ ಅವರಿಗೆ 1 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಉಗ್ರ ಸಂಘಟನೆ ಘೋಷಣೆ ಮಾಡಿದೆ. ಇತ್ತೀಚೆಗೆ ಭದ್ರತಾ ಪಡೆ ಯೋಧರು ನಡೆಸಿದ ಕಾರ್ಯಚರಣೆ ವೇಳೆ ಕೂದಲೆಳೆಯ ಅಂತರದಲ್ಲಿ ದುಜಾನ ಮತ್ತು ಇನ್ನಿತರ 4 ಉಗ್ರರು ತಪ್ಪಿಸಿಕೊಂಡಿದ್ದರು.