ರೈಲಿನಲ್ಲಿ ಅಶ್ಲೀಲ ಚಟುವಟಿಕೆ: ಕೇರಳ ಮೂಲದ ವ್ಯಕ್ತಿ ಬಂಧನ

ರೈಲಿನಲ್ಲಿ ಅಶ್ಲೀಲ ಚಟುವಟಿಕೆ ನಡೆಸಿದ ಆರೋಪದ ಮೇಲೆ ಕೇರಳ ಮೂಲದ ವ್ಯಕ್ತಿಯೊರ್ವನನ್ನು ಸರ್ಕಾರಿ ರೈಲ್ವೆ ಪೊಲೀಸ್ ಬಂಧಿಸಿದ್ದಾರೆ.
ವ್ಯಕ್ತಿ ಬಂಧನ
ವ್ಯಕ್ತಿ ಬಂಧನ

ಬೆಂಗಳೂರು: ರೈಲಿನಲ್ಲಿ ಅಶ್ಲೀಲ ಚಟುವಟಿಕೆ ನಡೆಸಿದ ಆರೋಪದ ಮೇಲೆ ಕೇರಳ ಮೂಲದ ವ್ಯಕ್ತಿಯೊರ್ವನನ್ನು ಸರ್ಕಾರಿ ರೈಲ್ವೆ ಪೊಲೀಸ್ ಬಂಧಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಚಟುವಟಿಕೆ ನಡೆಸಿದ ಆರೋಪದ ಮೇಲೆ ಆರೋಪಿ 34 ವರ್ಷದ ರಾಬಿನ್ ತಮರಪಳ್ಳಿ ವಿರುದ್ಧ ಐಪಿಸಿ ಸೆಕ್ಷನ್ 294(ಎ)ಮತ್ತು(4) ಮಹಿಳಾ ಕಿರುಕುಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಆರ್ಪಿ ಇನ್ಸ್ ಪೆಕ್ಟರ್ ಸಲೀಂ ತಿಳಿಸಿದ್ದಾರೆ.

ಯಶವಂತಪುರ-ಕೊಚ್ಚುವೇಲಿ ಗರಿಬ್ ರಾಜ್ ಎಕ್ಸ್ ಪ್ರೆಸ್ ರೈಲಿನಲ್ಲಿ ತ್ರಿಶೂರ್ ನಲ್ಲಿ ಖಾಸಗಿ ಕಂಪನಿಯಲ್ಲಿ ಮಾರ್ಕೇಟಿಂಗ್ ಕಾರ್ಯನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ರಾಬಿನ್ ಪ್ರಯಾಣಿಸುತ್ತಿದ್ದು ಆತ ಅಶ್ಲೀಲವಾಗಿ ಚಟುವಟಿಕೆ ನಡೆಸಿದ್ದಾನ ಎಂದು ಕೇರಳ ಮೂಲದ ಮಹಿಳೆಯೊಬ್ಬರು ದೂರು ನೀಡಿದ್ದರು.

ರೈಲಿನಲ್ಲಿ ವ್ಯಕ್ತಿಯೊರ್ವ ಅಶ್ಲೀಲ ಚಟುವಟಿಕೆಯಲ್ಲಿ ತೊಡಗಿದ್ದಾನೆ ಎಂದು ಮಹಿಳೆಯೊಬ್ಬರು ರೈಲ್ವೆ ಹೆಲ್ಪ್ ಲೈನ್ 1582ಗೆ ರಾತ್ರಿ 7 ಗಂಟೆ ಸುಮಾರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಮಹಿಳೆಯ ದೂರಿನನ್ವಯ ಸೇಲಂ ರೈಲ್ವೆ ಅಧಿಕಾರಿಗಳು ಮಧ್ಯರಾತ್ರಿ 1.30ರ ಸುಮಾರಿಗೆ ಆರೋಪಿಯನ್ನು ಬಂಧಿಸಿದ್ದಾರೆ.

ಅಶ್ಲೀಲ ಚಟುವಟಿಕೆ ನಡೆಸಿದ ಆರೋಪ ಮೇಲೆ ಏಪ್ರಿಲ್ 4ರವರೆಗೆ ರಾಬಿನ್ ಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com