ಇಸಿಸ್ ಉಗ್ರ ಸಂಘಟನೆ ಸೇರಲು ನಿರಾಕರಿಸಿದ ಬಾಲಕನ ಕೊಂದ ಶಿಕ್ಷಕ

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆಗೆ ಸೇರಲು ನಿರಾಕರಿಸಿದ ಎಂಬ ಕಾರಣಕ್ಕೆ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಹತ್ಯೆ ಮಾಡಿರಿುವ ಘಟನೆ ಉತ್ತರಪ್ರದೇಶದ...
ಇಸಿಸ್ ಸೇರಲು ನಿರಾಕರಣೆ: ಬಾಲಕನನ್ನು ಕೊಂದ ಶಿಕ್ಷಕ
ಇಸಿಸ್ ಸೇರಲು ನಿರಾಕರಣೆ: ಬಾಲಕನನ್ನು ಕೊಂದ ಶಿಕ್ಷಕ
Updated on: 

ಅಲಹಾಬಾದ್: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆಗೆ ಸೇರಲು ನಿರಾಕರಿಸಿದ ಎಂಬ ಕಾರಣಕ್ಕೆ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಹತ್ಯೆ ಮಾಡಿರಿುವ ಘಟನೆ ಉತ್ತರಪ್ರದೇಶದ ಅಲಹಾಬಾದ್ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ರವಿ ಪಾಲ್ (11) ಮೃತ ಬಾಲಕನಾಗಿದ್ದು, ಬಾಲಕ 3ನೇ ತರಗತಿಯಲ್ಲಿ ಓದುತ್ತಿದ್ದ. ಮನೆಯ ಹತ್ತಿರವಿರುವ ಟ್ಯೂಷನ್ ಹೋಗುತ್ತಿದ್ದ ಬಾಲಕನಿಗೆ ಅಲ್ಲಿನ ಇರ್ಫಾನ್ ಎಂಬ ಶಿಕ್ಷಕ ಇಸಿಸ್ ಗೆ ಸೇರುವಂತೆ ಬಲವಂತ ಮಾಡಿದ್ದಾನೆ. ಇದಕ್ಕೆ ಬಾಲಕ ನಿರಾಕರಿಸಿದ್ದ ಕಾರಣಕ್ಕೆ ಆತನ ಕತ್ತು ಹಿಸುಕಿ ಹತ್ಯೆಮಾಡಿದ್ದಾನೆಂದು ಪೋಷಕರು ಆರೋಪಿಸಿದ್ದಾರೆ.

ತಮ್ಮ ಮಗನ ಸಾವು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಪ್ಪುಲಾಲ್ ಅವರು, ಶಿಕ್ಷಕ ಇರ್ಫಾನ್ ಮಗ ರವಿಗೆ ಇಸಿಸ್ ಗೆ ಸೇರುವಂತೆ ಪ್ರತಿದಿನ ಹಿಂಸೆ ನೀಡುತ್ತಿದ್ದ. ಇದಕ್ಕೆ ಮಗ ನಿರಾಕರಿಸಿರುವುದಕ್ಕೆ ಕೊಲೆ ಮಾಡಿದ್ದಾನೆಂದು ಆರೋಪ ವ್ಯಕ್ತಪಡಿಸಿದ್ದಾರೆ.

ಇದರಂತೆ ಬಾಲಕನ ಸಹೋದರಿ ಪ್ರೀತಿ ಮಾತನಾಡಿದ್ದು, ನನ್ನ ತಮ್ಮನಿಗೆ ಇರ್ಫಾನ್ ಮಾರ್ಚ್ 19 ರಂದು ಸೈಕಲ್ ಕೊಡಿಸುವುದಾಗಿ ಆಸೆ ತೋರಿಸಿ ಕರೆದುಕೊಂಡು ಹೋಗಿದ್ದ. ಸಂಜೆ ಆದರೂ ರವಿ ಮನೆಗೆ ಬಂದಿರಲಿಲ್ಲ. ಹೀಗಾಗಿ ರವಿಗಾಗಿ ಹುಡುಕಾಟ ಆರಂಭಿಸಿದ್ದೆವು. ಎಷ್ಟು ಹುಡುಕಿದ್ದರೂ ರವಿ ಸಿಕ್ಕಿರಲಿಲ್ಲ. ನಂತರ ಪೊಲೀಸರಿಗೆ ದೂರು ನೀಡಲಾಗಿತ್ತು ಎಂದು ಹೇಳಿದ್ದಾರೆ.

ಪ್ರಕರಣ ದಾಖಲಿಸಿದ್ದ ಪೊಲೀಸರು ಬಾಲಕನಿಗಾಗಿ ಹುಡುಕಾಟ ಆರಂಭಿಸಿದ್ದರು. ನಂತರ ಹಳ್ಳಿಯೊಂದರಲ್ಲಿ ಮೃತ ದೇಹ ಪತ್ತೆಯಾಗಿತ್ತು. ಇದರಂತೆ ಪತ್ತೆಯಾದ ಮೃತದೇಹ ರವಿಯದ್ದೇ ಎಂದು ಗುರ್ತಿಸಲಾಗಿದೆ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com