ಕೊಚ್ಚಿ: ಮಾಜಿ ಕ್ರಿಕೆಟಿಗ ಶ್ರೀಶಾಂತ್ ಈಗ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ. ಚುನಾವಣೆ ಸಮೀಪಿಸುತ್ತಿದ್ದಂತೆ ಕೇರಳದಲ್ಲೀಗ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಶ್ರೀಶಾಂತ್ ಮಾರ್ಚ್ 29ರಂದು ಟ್ವಿಟರ್‌ನಲ್ಲಿ ಚುನಾವಣಾ ಪ್ರಚಾರದ ಫೋಟೋವೊಂದನ್ನು ಟ್ವೀಟ್ ಮಾಡಿದ್ದರು.
ಆದರೆ ನೆಟಿಜನ್‌ಗಳು ಆ ಫೋಟೋಗೆ ವಿವಿಧ ಶೀರ್ಷಿಕೆಗಳನ್ನು ನೀಡಿ ಟ್ರೋಲ್ ಮಾಡಿದ್ದಾರೆ. ಶ್ರೀಶಾಂತ್‌ನ ಆ ಪೋಸ್ ಮರಿಜುವಾನಾ ಅಥವಾ ಬಿರಿಯಾನಿಯ ಘಮವನ್ನು ಆಸ್ವಾದಿಸುವಂತಿದೆ ಎಂಬ ಹಲವಾರು ಟ್ರೋಲ್‌ಗಳು ಟ್ವಿಟರ್‌ನಲ್ಲಿ ಹರಿದಾಡುತ್ತಿವೆ.
ಚುನಾವಣಾ ಪ್ರಚಾರದಲ್ಲಿ ತೊಡಗಿರುವುದನ್ನು ತೋರಿಸುವುದಕ್ಕೋಸ್ಕರ ಶ್ರೀಶಾಂತ್ ಆ ಫೋಟೋವನ್ನು ಟ್ವೀಟ್ ಮಾಡಿದ್ದರೆ, ಇತ್ತ ನೆಟಿಜನ್‌ಗಳು ಆ ಫೋಟೋಗೆ ವಿವಿಧ ಶೀರ್ಷಿಕೆ ನೀಡಿ, ಫೋಟೋಶಾಪ್ ಮಾಡಿ ಆತನನ್ನು ಪರಿಹಾಸ್ಯಕ್ಕೀಡುಮಾಡಿದ್ದಾರೆ.