

ನವದೆಹಲಿ: ಪಠಾಣ್ ಕೋಟ್ ವಾಯು ನೆಲೆ ಮೇಲಿನ ಭಯೋತ್ಪಾದಕ ದಾಳಿ ಪ್ರಕರಣದ ಬಗ್ಗೆ ತನಿಖೆ ಮುಂದುವರೆಸಲು ಭಾರತದ ತನಿಖಾ ತಂಡವೊಂದು ಪಾಕಿಸ್ತಾನಕ್ಕೆ ಭೇಟಿ ನೀದಲಿದೆ ಎಂದು ಎನ್ ಐಎ ತಿಳಿಸಿದೆ.
ಪಾಕಿಸ್ತಾನಕ್ಕೆ ತನಿಖಾ ತಂಡವೊಂದನ್ನು ಕಳಿಸುವ ಪ್ರಸ್ತಾವನೆಗೆ ಪಾಕಿಸ್ತಾನ ಒಪ್ಪಿಕೊಂಡಿದೆ ಎಂದು ಎನ್ಐಎ ಪ್ರಧಾನ ನಿರ್ದೇಶಕ ಶರದ್ ಕುಮಾರ್ ಹೇಳಿದ್ದಾರೆ. ಪಾಕಿಸ್ತಾನ ತನಿಖಾ ತಂಡ 13 ಸಾಕ್ಷಿಗಳಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ದಾಳಿಯಲ್ಲಿ ಸೇನೆ ಹೊಡೆದುರುಳಿಸಿದ್ದ 4 ಉಗ್ರರ ಡಿಎನ್ಎ ವರದಿಗಳನ್ನು ಪಡೆದಿದೆ. ಇದೇ ವೇಳೆ ಭಾರತವೂ ಪಾಕಿಸ್ತಾನಕ್ಕೆ ತನಿಖಾ ತಂಡವನ್ನು ಕಳಿಸುವ ಪ್ರಸ್ತಾವನೆಗೆ ಪಾಕಿಸ್ತಾನ ಒಪ್ಪಿಗೆ ಸೂಚಿಸಿದೆ. ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.