ಉತ್ತರಾಖಂಡ ಕಾಡ್ಗಿಚ್ಚಿನ ತಾಪಕ್ಕೆ ಕರಗುತ್ತಿವೆ ನೀರ್ಗಲ್ಲುಗಳು: ತಜ್ಞರ ಎಚ್ಚರಿಕೆ

ಕಳೆದ ಹಲವು ದಿನಗಳಿಂದ ಉತ್ತರಾಖಂಡದಲ್ಲಿ ಸತತವಾಗಿ ಹೊತ್ತಿ ಉರಿಯುತ್ತಿರುವ ಕಾಡ್ಗಿಚ್ಚಿನಿಂದಾಗಿ ಉತ್ತರ ಭಾರತದಲ್ಲಿನ ನೀರ್ಗಲ್ಲುಗಳು ಕರಗುತ್ತಿವೆ ಎಂದು ತಜ್ಞರು ಹೇಳಿದ್ದಾರೆ.
ಉತ್ತರಾಖಂಡ ಕಾಡ್ಗಿಚ್ಚು ಮತ್ತು ನೀರ್ಗಲ್ಲುಗಳು (ಸಂಗ್ರಹ ಚಿತ್ರ)
ಉತ್ತರಾಖಂಡ ಕಾಡ್ಗಿಚ್ಚು ಮತ್ತು ನೀರ್ಗಲ್ಲುಗಳು (ಸಂಗ್ರಹ ಚಿತ್ರ)
Updated on: 

ಡೆಹ್ರಾಡೂನ್: ಕಳೆದ ಹಲವು ದಿನಗಳಿಂದ ಉತ್ತರಾಖಂಡದಲ್ಲಿ ಸತತವಾಗಿ ಹೊತ್ತಿ ಉರಿಯುತ್ತಿರುವ ಕಾಡ್ಗಿಚ್ಚಿನಿಂದಾಗಿ ಉತ್ತರ ಭಾರತದಲ್ಲಿನ ನೀರ್ಗಲ್ಲುಗಳು ಕರಗುತ್ತಿವೆ ಎಂದು ತಜ್ಞರು  ಹೇಳಿದ್ದಾರೆ.

ಈಗಾಗಲೇ ಉತ್ತರಂಖಂಡ ಕಾಡ್ಗಿಚ್ಚಿನಿಂದಾಗಿ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದ್ದು, ಇದೀದ ಮತ್ತೊಂದು ಗಂಭೀರ ಸಮಸ್ಯೆ ಎದುರಾಗಿದ್ದು, ಕಾಡ್ಗಿಚ್ಚಿನ ತಾಪಮಾನಕ್ಕೆ  ನೀರ್ಗಲ್ಲುಗಳು ಕರಗಲು ಆರಂಭಿಸಿವೆ. ಇದರಿಂದ ಸ್ಥಳೀಯ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ನೀರ್ಗಲ್ಲು ಕರಗುವ ವೇಗ ಹೆಚ್ಚಾದರೆ ಪ್ರವಾಹ ಕೂಡ ಸಂಭವಿಸಬಹುದು ಎಂದು  ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕಾಡ್ಗಿಚ್ಚಿನಿಂದ ಉತ್ಪತ್ತಿಯಾಗುತ್ತಿರುವ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಾಗಿರುವ ಕಪ್ಪು ಹೊಗೆ ಮತ್ತು ಬೂದಿ ನೀರ್ಗಲ್ಲುಗಳ ಮೇಲೆ ಕೂರುತ್ತಿದೆ. ಇದು ನೀರ್ಗಲ್ಲು ವೇಗವಾಗಿ ಕರಗುವಂತೆ ಮಾಡುತ್ತಿದೆ  ಎಂದು ನೈನಿಟಾಲ್​ನಲ್ಲಿರುವ ಆರ್ಯಭಟ ರಿಸರ್ಚ್ ಇನ್ಸ್​ಟಿಟ್ಯೂಟ್ ಆಫ್ ಅಬ್ಸರ್​ವೇಷನಲ್ ಸೈನ್ಸಸ್ (ಎಆರ್​ಐಇಎಸ್) ಮತ್ತು ಅಲ್ಮೋರಾದಲ್ಲಿರುವ ಗೋವಿಂದ್ ವಲ್ಲಭ ಪಂತ್ ಇನ್ಸ್​ ಟಿಟ್ಯೂಟ್ ಆಫ್ ಹಿಮಾಲಯನ್ ಎನ್​ವಾಯರ್ನ್​ಮೆಂಟ್ ಅಂಡ್ ಡೆವಲಪ್​ವೆುಂಟ್​ನ (ಹಿಮಾಲಯ ಪರಿಸರ ಮತ್ತು ಅಭಿವೃದ್ಧಿ ಸಂಸ್ಥೆ) ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕಾಡ್ಗಿಚ್ಚಿನಿಂದ ಉತ್ಪತ್ತಿಯಾಗಿರುವ ಕಪ್ಪು ಹೊಗೆ ಬೆಳಕನ್ನು ಹೀರಿಕೊಂಡು ವಾತಾವರಣದಲ್ಲಿ ಶಾಖವನ್ನು ಹೆಚ್ಚಿಸುತ್ತದೆ. ಇದರಿಂದ ನೀರ್ಗಲ್ಲುಗಳ ಕರಗುವ ಪ್ರಮಾಣ ಹೆಚ್ಚಾಗುತ್ತದೆ. ಕಪ್ಪು ಹೊಗೆ  ಮತ್ತು ಬೂದಿ ಮಿಶ್ರಿತ ನೀರು ನದಿಗೆ ಸೇರುವುದರಿಂದ ನದಿ ನೀರು ಸಹ ಕಲುಷಿತಗೊಳ್ಳುತ್ತದೆ. ಇದು ನದಿ ಪಾತ್ರದ ಜನರ ಆರೋಗ್ಯ ಮತ್ತು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು  ಮಾಡುತ್ತದೆ. ಕಾಡ್ಗಿಚ್ಚಿನಿಂದಾಗಿ ಉತ್ತರಾಖಂಡ ಮತ್ತು ಉತ್ತರ ಭಾರತದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಈಗಾಗಲೇ ಸಾಮಾನ್ಯ ತಾಪಮಾನಕ್ಕಿಂತ 0.2 ಡಿಗ್ರಿ ಉಷ್ಣಾಂಶ ಏರಿಕೆಯಾಗಿದೆ. ಇದು  ಮುಂಗಾರು ಮೇಲೆ ಸಹ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ ಎಂದು ಗೋವಿಂದ್ ವಲ್ಲಭ ಪಂತ್ ಹಿಮಾಲಯ ಪರಿಸರ ಮತ್ತು ಅಭಿವೃದ್ಧಿ ಸಂಸ್ಥೆಯ ತಜ್ಞ ಕಿರಿಟ್ ಕುಮಾರ್ ಅಭಿಪ್ರಾಯ  ಪಟ್ಟಿದ್ದಾರೆ.

ಗಂಗಾ ನದಿಯ ಉಗಮ ಸ್ಥಾನ ಗಂಗೋತ್ರಿ, ಮಿಲಮ್ ಸುಂದರ್​ದುಂಗಾ, ನೇವಲಾ ಮತ್ತು ಚೀಪಾ ನೀರ್ಗಲ್ಲುಗಳು ಕರಗುವ ಭೀತಿ ಎದುರಿಸುತ್ತಿವೆ ಎಂದು ಎಆರ್​ಐಇಎಸ್​ನ ಹಿರಿಯ ವಿಜ್ಞಾನಿ  ಮನೀಷ್ ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com