

ಮಹಬೂಬನಗರ: ಬೇಸಿಗೆಯಲ್ಲೂ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಬೇಕು ಎಂದು ತೆಲಂಗಾಣ ಸರ್ಕಾರ ನೀಡಿರುವ ಆದೇಶ ಮಕ್ಕಳ ಪಾಲಿಗೆ ಬಿಸಿತುಪ್ಪವಾಗಿದೆ.
ತೆಲಂಗಾಣದ ಹಲವು ಪ್ರದೇಶಗಳಲ್ಲಿ ಆಹಾರ ಸರಬರಾಜು ಮಾಡುವ ಏಜೆನ್ಸಿಗಳು ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಕೇವಲ ಮೆಣಸಿನಕಾಯಿ ಪುಡು ಬೆರೆಸಿದ ಅನ್ನ ನೀಡಿ ಡಯಟ್ ಮಾಡಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಮಕ್ಕಳಿಗೆ ಚಪಾತಿ, ಮೊಟ್ಟೆ, ತರಕಾರಿಗಳನ್ನು ನೀಡುವಂತೆ ಆದೇಶ ನೀಡಿದ್ದರೂ ಮಹಬೂಬ ನಗರ ಜಿಲ್ಲೆಯ ಬಿಜ್ವಾರಾಂ ಗ್ರಾಮ ಸೇರಿದಂತೆ ಹಲವು ಶಾಲೆಗಳಲ್ಲಿ ಕೇವಲ ಅನ್ನ ಮತ್ತು ಸಾಂಬಾರು ಪುಡಿ ಕಲೆಸಿಕೊಡುತ್ತಿರುವುದು, ಅಧಿಕಾರಿಗಳು ಪರಿಶೀಲನೆ ನಡೆಸಲು ಬಂದಾಗ ತಿಳಿದು ಬಂದಿದೆ.
ಇದನ್ನು ನೋಡಿದ ಅಧಿಕಾರಿಗಳು ಆಘಾತಕ್ಕೊಳಗಾಗಿದ್ದಾರೆ. ಮಕ್ಕಳಿಗೆ ಯಾವುದೇ ರೀತಿಯ ಪೌಷ್ಠಿಕ ಆಹಾರ ನೀಡುತ್ತಿಲ್ಲ, ಜೊತೆಗೆ ಕಡಿಮೆ ಪ್ರಮಾಣದಲ್ಲಿ ಅಡುಗೆ ತಯಾರಿಸಲಾಗುತ್ತದೆ. ಸ್ವಲ್ಪ ಪ್ರಮಾಣದಲ್ಲಿ ಊಟ ನೀಡಲಾಗುತ್ತದೆ ಎಂದು 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಅಧಿಕಾರಿಗಳಿಗೆ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡಿರುವ ಅಧಿಕಾರಿಗಳು ಜಿಲ್ಲಾಡಳಿತದ ಉನ್ನತ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ. .