ನೋಯ್ಡಾ: ಶೈಕ್ಷಣಿಕ ಸಾಲ ಪಡೆದುಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಹೇಳಿರುವ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್, ಅತೀ ಹೆಚ್ಚು ಶುಲ್ಕ ತೆತ್ತು ಅನಗತ್ಯ ಡಿಗ್ರಿಗಳನ್ನು ನೀಡುವ ವಿದ್ಯಾಲಯಗಳ ಮೋಸದಾಟಕ್ಕೆ ಬಲಿಯಾಗಬೇಡಿ ಎಂದಿದ್ದಾರೆ.
ಹೆಚ್ಚಿನ ಗುಣಮಟ್ಟದ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಪಡೆಯುವುದಕ್ಕೆ ಹೆಚ್ಚಿನ ದುಡ್ಡು ಅತ್ಯಗತ್ಯ. ಹೀಗಿರುವಾಗ ಸೂಕ್ತ ವಿದ್ಯಾರ್ಥಿಗಳಿಗೆ ಇಂಥಾ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕು.
ಶೈಕ್ಷಣಿಕ ಸಾಲವನ್ನು ಪಡೆದುಕೊಂಡವರು ಅದನ್ನು ಪಾವತಿಸಲು ಸಾಧ್ಯವಾಗುವಂತೆ ಕೆಲಸ ಗಿಟ್ಟಿಸುವ ಮಟ್ಟಕ್ಕೆ ಬೆಳೆಯಬೇಕು ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ಶಿವ್ ನಾಡಾರ್ ವಿವಿಯಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ರಾಜನ್, ವಿದ್ಯಾರ್ಥಿಗಳನ್ನು ಸಾಲದಲ್ಲಿ ಮುಳುಗಿಸಿ ಅವರಿಗೆ ಅನಗತ್ಯ ಡಿಗ್ರಿಗಳನ್ನು ಕೊಡಮಾಡುವ ವಿದ್ಯಾಲಯಗಳ ಬಗ್ಗೆ ನಾವು ಜಾಗ್ರತೆ ವಹಿಸಬೇಕೆಂದಿದ್ದಾರೆ.