ಪೊಲೀಸರ ಸರ್ಪಗಾವಲನ್ನೇ ಭೇದಿಸಿ 3 ರೈಫಲ್ ಗಳನ್ನು ಹೊತ್ತೊಯ್ದ ಶಂಕಿತ ಉಗ್ರರು

ಪೊಲೀಸ್ ಕೋಟೆಯನ್ನೇ ಭೇದಿಸಿರುವ ಶಂಕಿತ ಉಗ್ರರು ಅತ್ಯಾಧುನಿಕ ಮೂರು ರೈಫಲ್​ಗಳನ್ನು ಕದ್ದೊಯ್ದ ಘಟನೆ ಜಮ್ಮು ಕಾಶ್ಮೀರದ ಕುಲಗಾಂನಲ್ಲಿ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಪೊಲೀಸ್ ಸರ್ಪಗಾವಲನ್ನೇ ಭೇದಿಸಿರುವ ಶಂಕಿತ ಉಗ್ರರು  ಅತ್ಯಾಧುನಿಕ ಮೂರು ರೈಫಲ್​ಗಳನ್ನು ಕದ್ದೊಯ್ದ ಘಟನೆ ಜಮ್ಮು ಕಾಶ್ಮೀರದ ಕುಲಗಾಂನಲ್ಲಿ ನಡೆದಿದೆ.

ನಾಲ್ಕು ಮಂದಿ ಶಂಕಿತ ಉಗ್ರರು ಕುಲಗಾಂ ಪ್ರದೇಶದಲ್ಲಿ ನಿಯೋಜಿಸಲಾದ ಪೊಲೀಸ್ ಪಡೆಯನ್ನೇ  ಯಾಮಾರಿಸಿ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಶನಿವಾರ ರಾತ್ರಿ ಘಟನೆ ನಡೆದಿದ್ದು, ಇದೀಗ ಪೊಲೀಸರ ಕರ್ತವ್ಯ ಪ್ರಜ್ಞೆಯನ್ನೇ ಪ್ರಶ್ನಿಸುವಂತಾಗಿದೆ.

ಲೂಟಿ ಮಾಡಲಾದ ಶಸ್ತ್ರಾಸ್ತ್ರಗಳ ಪೈಕಿ ಎರಡು ಎಕೆ 47 ಆಗಿದ್ದು, ಇನ್ನೊಂದು ಐಎನ್​ಎಸ್​ಎಎಸ್ ರೈಫಲ್ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾಡಳಿತ ಈಗಾಗಲೇ ಕೂಡಲೇ ಶಂಕಿತರನ್ನು ಬಂಧಿಸಿ, ತನಿಖೆ ನಡೆಸಲು ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com