ಮೈಸೂರು: ಮುಂಬೈ ಮೂಲದ ಮೂರು ವರ್ಷದ ಹೆಣ್ಣು ಮಗುವನ್ನು ಅಪಹರಿಸಿದ್ದ ಭಿಕ್ಷುಕನನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ಮಂಡಿ ಮೊಹಲ್ಲಾ ನಿವಾಸಿ ಸಪುರ ಬಿ (60) ಬಂಧಿತ ಆರೋಪಿ. ಮಸೀದಿ ಮುಂದೆ ಭಿಕ್ಷೆ ಬೇಡುತ್ತಿದ್ದ ಈತ ಮುಂಬೈನ ಬಿಂದಿ ಬಜಾರ್ ನಲ್ಲಿ ಆರು ತಿಂಗಳ ಹಿಂದೆ ಮಗುವನ್ನು ಅಪಹರಿಸಿದ್ದನು.
ಮೈಸೂರಿಗೆ ಬಂದ ಈತ ಅಪಹರಣ ಮಾಡಿದ ಮೂರು ವರ್ಷದ ಬಾಲಕಿಯಿಂದ ಭಿಕ್ಷೆ ಬೇಡಿಸುತ್ತಿದ್ದನು. ಸ್ಥಳೀಯರಿಗೆ ಈತನ ಚಲನವಲನಗಳಿಂದ ಅನುಮಾನ ಬಂದ ಹಿನ್ನಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತದ ನಂತರ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಪೋಷಕರ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.