ಬಂಧಿತ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರನಿಗೂ ಇದೆ ಆಧಾರ್ ಕಾರ್ಡ್!

ಜಮ್ಮು ಕಾಶ್ಮೀರದ ಬಾರಮುಲ್ಲಾ ಪ್ರದೇಶದಲ್ಲಿ ಬಂಧಿತನಾದ ಪಾಕ್ ಆಕ್ರಮಿತ ಕಾಶ್ಮೀರದ ಜೈಷೆ ಮುಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್‌ಗೂ...
ಬಂಧಿತ ಉಗ್ರನ ಆಧಾರ್ ಕಾರ್ಡ್
ಬಂಧಿತ ಉಗ್ರನ ಆಧಾರ್ ಕಾರ್ಡ್
Updated on
ಶ್ರೀನಗರ: ಇತ್ತೀಚೆಗೆ ಜಮ್ಮು ಕಾಶ್ಮೀರದ ಬಾರಮುಲ್ಲಾ ಪ್ರದೇಶದಲ್ಲಿ ಬಂಧಿತನಾದ ಪಾಕ್ ಆಕ್ರಮಿತ ಕಾಶ್ಮೀರದ ಜೈಷೆ ಮುಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್‌ಗೂ ಆಧಾರ್ ಕಾರ್ಡ್ ಇರುವುದಾಗಿ ಪೊಲೀಸರು ಹೇಳಿದ್ದಾರೆ. 
ಅಬ್ದುಲ್ ರೆಹ್ಮಾನ್ ಎಂಬ ಈ ಉಗ್ರನನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಶುಕ್ರವಾರ ಬಂಧಿಸಿದ್ದರು. ಈತನನ್ನು ವಿಚಾರಣೆಗೊಳಪಡಿಸಿದಾಗ ಈತ ಆಧಾರ್ ಕಾರ್ಡ್ ಹೊಂದಿರುವುದು ತಿಳಿದು ಬಂದಿದೆ.
ಪೊಲೀಸರ ಪ್ರಕಾರ ಈ ಉಗ್ರ ಪಾಕ್ ಮೂಲದ ಜೈಷೆ ಮೊಹಮ್ಮದ್ ಸಂಘಟನೆಗೆ ಸೇರಿದವನಾಗಿದ್ದು, ಪಠಾಣ್‌ಕೋಟ್ ದಾಳಿಯಲ್ಲಿಯೂ ಭಾಗಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಮುಜಾಫರಾಬಾದ್ ನಿವಾಸಿಯಾಗಿರುವ ರೆಹ್ಮಾನ್, ಕಳೆದ ಫೆಬ್ರವರಿ ತಿಂಗಳಲ್ಲಿ ಜೈಷೆ ಸಂಘಟನೆಯ 6 ಸದಸ್ಯರೊಂದಿಗೆ ಕಾಶ್ಮೀರಕ್ಕೆ ಬಂದಿದ್ದನು. ಆಧಾರ್ ಕಾರ್ಡ್‌ನಲ್ಲಿ ಈತನ ಹೆಸರು ಶಬೀರ್ ಅಹ್ಮದ್ ಖಾನ್ ಎಂದಿದ್ದು ಅಪ್ಪನ ಹೆಸರು ಗುಲಾಂ ರಸೂಲ್ ಖಾನ್ ಎಂದಿದೆ.
ಆದಾಗ್ಯೂ, ಈ ಆಧಾರ್‌ಕಾರ್ಡ್‌ನ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಈತ ಆಧಾರ್‌ಕಾರ್ಡ್‌ನ್ನು ತಿದ್ದಿ ಅಥವಾ ನಕಲು ಮಾಡಿಕೊಂಡಿರುವುದೇ? ಎಂಬುದರ ಬಗ್ಗೆಯೂ ಸಂಶಯವಿದೆ.
ಒಂದು ವೇಳೆ ಈ ಆಧಾರ್ ಕಾರ್ಡ್ ನಿಜವಾದ ಕಾರ್ಡ್ ಆಗಿದ್ದರೆ, ಈತನಿಗೆ ಅದ್ಹೇಗೆ ಆಧಾರ್ ಕಾರ್ಡ್ ನೀಡಲಾಯಿತು? ಎಂಬುದು ದೊಡ್ಡ ಪ್ರಶ್ನೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com