ದೇಶ

ಭಾರತದ ಸೌರ ವಿದ್ಯುತ್ ಯೋಜನೆಗಾಗಿ ಐಎಂಎಫ್ ನಿಂದ 625 ಮಿಲಿಯನ್ ಡಾಲರ್ ಬಿಡುಗಡೆ

ಭಾರತದ ಸೌರ ವಿದ್ಯುತ್ ಯೋಜನೆಗಾಗಿ ವಿಶ್ವ ಬ್ಯಾಂಕ್ 625 ಮಿಲಿಯನ್ ಡಾಲರ್ ಮೊತ್ತದ ಸಾಲ ಮಂಜೂರು ಮಾಡಿದೆ.

ಭಾರತದ ಸೌರ ವಿದ್ಯುತ್ ಯೋಜನೆಗಾಗಿ ಐಎಂಎಫ್ ನಿಂದ 625 ಮಿಲಿಯನ್ ಡಾಲರ್ ಬಿಡುಗಡೆ
ಸೌರ ವಿದ್ಯುತ್ ಯೋಜನೆ
Published On :

ನವದೆಹಲಿ: ಭಾರತದ ಸೌರ ವಿದ್ಯುತ್ ಯೋಜನೆಗಾಗಿ ವಿಶ್ವ ಬ್ಯಾಂಕ್ 625 ಮಿಲಿಯನ್ ಡಾಲರ್ ಮೊತ್ತದ ಸಾಲ ಮಂಜೂರು ಮಾಡಿದೆ.

ಗ್ರಿಡ್ ಸಂಪರ್ಕ ಹೊಂದಿರುವ ಸೌರ ವಿದ್ಯುತ್ ಉತ್ಪಾದನೆ ಯೋಜನೆಗಾಗಿ ಐಎಂಎಫ್ ಹಣ ಬಿಡುಗಡೆ ಮಾಡಿದೆ. ಈ ಯೋಜನೆಯಡಿಯಲ್ಲಿ ಭಾರತದಾದ್ಯಂತ 400 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿರುವ ಗ್ರಿಡ್ ಗಳನ್ನು ಸ್ಥಾಪಿಸಲಾಗುತ್ತದೆ.

625 ಮಿಲಿಯನ್ ಡಾಲರ್ ಮೊತ್ತದೊಂದಿಗೆ ಹವಾಮಾನ ಹೂಡಿಕೆ ನಿಧಿ ಹಾಗೂ ಇತರ ಆರ್ಥಿಕ ನೆರವಿನ ಮೂಲಕ  ಒಟ್ಟು 125 ಮಿಲಿಯನ್ ಡಾಲರ್ ನಷ್ಟು ಅನುದಾನವನ್ನು ಘೋಷಿಸಿದೆ. ಭಾರತ ಹೆಚ್ಚು ಸೌರ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದ್ದು ಸರ್ಕಾರಕ್ಕೆ ಐಎಂಎಫ್ ನೆರವು ನೀಡಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಯೋಜನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜಾರಿಗೆ ತರಲಿದ್ದು ಸೌರ ವಿದ್ಯುತ್ ಉತ್ಪಾದನೆ ಮಾಡುವುದಕ್ಕೆ ಹೂಡಿಕೆ ಮಾಡಲು ಸಾಲವನ್ನು ನೀಡಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.