ಭಾರತದ ಜಿಹಾದಿಗಳಿಗೆ ಇಸೀಸ್ ಉಗ್ರ ಸಂಘಟನೆಯೇ ಆಶಾಕಿರಣ!

ಭಾರತದಲ್ಲಿರುವ ಮೂಲಭೂತವಾದಿ ಇಸ್ಲಾಂ ನ ಯುವಕರು ಇಸೀಸ್ ಬಗ್ಗೆಯೇ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ ಎಂಬ ಆತಂಕಕಾಗಿ ಅಂಶ ಹೊರಬಿದ್ದಿದೆ.
ಭಾರತದ ಜಿಹಾದಿಗಳಿಗೆ ಇಸೀಸ್ ಉಗ್ರ ಸಂಘಟನೆಯೇ ಆಶಾಕಿರಣ!
ಭಾರತದ ಜಿಹಾದಿಗಳಿಗೆ ಇಸೀಸ್ ಉಗ್ರ ಸಂಘಟನೆಯೇ ಆಶಾಕಿರಣ!
Updated on: 

ನವದೆಹಲಿ: ಭಾರತದಲ್ಲಿರುವ ಮೂಲಭೂತವಾದಿ ಇಸ್ಲಾಂ ನ ಯುವಕರು ಲಷ್ಕರ್-ಎ-ತೊಯ್ಬಾ ಹಾಗೂ ಜೈಶ್-ಎ-ಮೊಹಮ್ಮದ್ ನಂತಹ ಉಗ್ರ ಸಂಘಟನೆಗಳಿಂದ ದೂರವಾಗುತ್ತಿದ್ದು ಇಸೀಸ್ ಬಗ್ಗೆಯೇ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ ಎಂಬ ಆತಂಕಕಾಗಿ ಅಂಶ ಹೊರಬಿದ್ದಿದೆ.

ಜಿಹಾದಿ ಚಟುವಟಿಕೆಗಳನ್ನು ನಡೆಸಲು ಸಾಮರ್ಥ್ಯ ನೀಡಿರುವ ಲಷ್ಕರ್ ಹಾಗೂ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟಾನೆಗಳಿಗಿಂತ ಇಸೀಸ್ ಉಗ್ರ ಸಂಘಟನೆ ಹೆಚ್ಚು ಬಲಿಷ್ಠವಾಗಿರುವ ಹಿನ್ನೆಲೆಯಲ್ಲಿ ಯುವಕರು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಿಗಿಂತ ಇಸೀಸ್ ನತ್ತಲೇ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿರುವ ವರದಿ ಮೂಲಕ ತಿಳಿದುಬಂದಿದೆ. 
"ಇತ್ತೀಚಿನ ವರೆಗೂ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ ಮೂಲಭೂತವಾದಿ ಯುವಕರು ಈಗ ಇಸೀಸ್ ನತ್ತ ಆಕರ್ಷಿತರಾಗುತ್ತಿದ್ದಾರೆ. ಎಂದು ಗುಪ್ತಚರ ಇಲಾಖೆ ಮೂಲಗಳೂ ತಿಳಿಸಿದ್ದು, ಇತ್ತೀಚೆಗೆ ಬಂಧಿಸಲಾದ ಯುವಕರು ಈ ವರೆಗೆ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್, ಸಿಮಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು, ಆದರೆ ಈಗ ಇಸೀಸ್ ನೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದೆ.

ಇಸೀಸ್ ನೊಂದಿಗೆ ಸಂಪರ್ಕ ಹೊಂದಿರುವ ಮೂಲಭೂತವಾದಿ ಯುವಕರ ಜಾಡನ್ನು ಪತ್ತೆ ಮಾಡುತ್ತಿರುವುದಾಗಿ ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com