

ಶ್ರೀನಗರ: ಬಿಜೆಪಿ-ಪಿಡಿಪಿ ಸರ್ಕಾರದ ವಿರುದ್ಧ ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು ಒಗ್ಗೂಡಿಸಲು ಪಾಕಿಸ್ತಾನ ಶತ ಪ್ರಯತ್ನ ನಡೆಸುತ್ತಿದೆ. ಪಾಕಿಸ್ತಾನದ ಯತ್ನಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿರುವ ಪ್ರತ್ಯೇಕತಾವಾದಿಗಳು ಸಹ ಈಗ ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದಾರೆ.
ಕಾಶ್ಮೀರ ಪ್ರತ್ಯೇಕತಾವಾದಿಗಳ ಗುಂಪು ಮೂರು ಪಕ್ಷಗಳಾಗಿದ್ದು, ಸಯೀದ್ ಅಲಿ ಗಿಲಾನಿ ಅವರ ಹುರಿಯತ್ ಕಾನ್ಫರೆನ್ಸ್, ಮಾಡರೇಟ್ ಹುರಿಯತ್ ಮುಖ್ಯಸ್ಥ ಮಿರ್ವೈಜ್ ಉಮರ್ ಹಾಗೂ ಜೆಕೆಎಲ್ ಎಫ್ ನ ಮುಖ್ಯಸ್ಥ ಮೊಹಮ್ಮದ್ ಯಾಸೀನ್ ಮಲ್ಲಿಕ್ ಭಿನ್ನಾಭಿಪ್ರಾಯ ಮರೆತು ಒಗ್ಗೂಡಲು ಯತ್ನಿಸುತ್ತಿದ್ದಾರೆ.
ಮಹಿಳಾ ಪ್ರತ್ಯೇಕತಾವಾದಿಯಾಗಿರುವ ಆಸಿಯಾ ಅಂದ್ರಾಬಿ ಅವರನ್ನೂ ಸಹ ಈ ಪ್ರತ್ಯೇಕತಾವಾದಿಗಳು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇನ್ನು ಗಿಲಾನಿ, ಮಿರ್ವೈಜ್ ಉಮರ್ ಸಂಘಟನೆಗಳಿಂದ ಅಂತರ ಕಾಯ್ದುಕೊಂಡಿದ್ದ ಯಾಸೀನ್ ಮಲ್ಲಿಕ್ ಸಂಘಟನೆ ಈಗ ಪ್ರತ್ಯೇಕತಾವಾದಿಗಳನ್ನು ಒಗ್ಗೂಡಿಸುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿದೆ. ಕಾಶ್ಮೀರಿ ಪ್ರತ್ಯೇಕತಾವಾದಿಗಳು ಒಗ್ಗೂಡುವುದಕ್ಕೆ ಪಾಕಿಸ್ತಾನ ನೆರವು ನೀಡುತ್ತಿದೆ.