ಬಿಸಿಲ ಝಳಕ್ಕೆ ಗುಜರಾತ್ ನಲ್ಲಿ ರಸ್ತೆಗಳೇ ಕರಗುತ್ತಿವೆ!

ಗುಜರಾತಿನಲ್ಲಿ ಬಿಸಿಳ ಝಳ ತಾರಕ್ಕೇರಿದ್ದು, ರಾಜ್ಯದಲ್ಲಿ ಹೆಚ್ಚಾಗಿರುವ ತಾಪಮಾನದ ತೀವ್ರತೆಗೆ ಅಲ್ಲಿನ ರಸ್ತೆಗಳೇ ಕರಗತೊಡಗಿವೆ...
ಬಿಸಿಲಿಗೆ ಕರಗುತ್ತಿರುವ ರಸ್ತೆಗಳು (ಎಎನ್ ಐ ಚಿತ್ರ)
ಬಿಸಿಲಿಗೆ ಕರಗುತ್ತಿರುವ ರಸ್ತೆಗಳು (ಎಎನ್ ಐ ಚಿತ್ರ)

ಗಾಂಧಿನಗರ: ಗುಜರಾತಿನಲ್ಲಿ ಬಿಸಿಳ ಝಳ ತಾರಕ್ಕೇರಿದ್ದು, ರಾಜ್ಯದಲ್ಲಿ ಹೆಚ್ಚಾಗಿರುವ ತಾಪಮಾನದ ತೀವ್ರತೆಗೆ ಅಲ್ಲಿನ ರಸ್ತೆಗಳೇ ಕರಗತೊಡಗಿವೆ.

ಗಾಂಧಿನಗರದ ವಲ್ಸದ್​ನಲ್ಲಿ ರಸ್ತೆಗೆ ಹಾಕಿರುವ ಟಾರು ಬಿಸಿಲ ಝಳಕ್ಕೆ ಕರಗುತ್ತಿದ್ದು, ಟಾರು ಕರಗಿ ಪಾದಚಾರಿಗಳು ರಸ್ತೆದಾಟಲು ಪರದಾಡುವ ದೃಶ್ಯ ಸಾಮಾನ್ಯವಾಗಿದೆ. ವಲ್ಸದ್​ನಲ್ಲಿ ಜನ ರಸ್ತೆಗೆ  ಇಳಿಯುತ್ತಿದ್ದಂತೆಯೇ ಶೂಗಳು, ಚಪ್ಪಲಿಗಳು ಬಿಸಿಗೆ ಕರಗುತ್ತಿರುವ ಟಾರಿಗೆ ಅಂಟಿಕೊಳ್ಳ ತೊಡಗಿದವು. ಇದರಿಂದ ಚಕಿತರಾದ ಅವರು ತಾರಿನಿಂದ ಶೂ, ಚಪ್ಪಲಿ ಬಿಡಿಸಿಕೊಳ್ಳಲು ಯತ್ನಿಸಿದಾಗ  ಕಾಲುಗಳಿಗೇ ತಾರು ಅಂಟಿಕೊಳ್ಳುತ್ತಿತ್ತು. ಮತ್ತೊಂದು ಘಟನೆಯಲ್ಲಿ ತಲೆ ಮೇಲೆ ಮೂಟೆ ಹೊತ್ತುಕೊಂಡ ಮಹಿಳೆ ವೇಗವಾಗಿ ರಸ್ತೆ ದಾಟಲಾಗದೆ ಮುಗ್ಗರಿಸಿ ಬಿದ್ದ ಘಟನೆ ಕೂಡ ನಡೆದಿದೆ.  ಸ್ಥಳೀಯರೊಬ್ಬರು ಈ ದೃಶ್ಯಾವಳಿಗಳನ್ನು ತಮ್ಮ ಮೊಬೈಲ್ ಚಿತ್ರೀಕರಿಸಿದ್ದು, ದೃಶ್ಯದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಮಹಿಳೆ ಬೀಳುವುದಷ್ಟೇ ಕೆಲವೇ ಸೆಕೆಂಡ್ ಮುಂಚೆ ಟ್ರಕ್ ಒಂದು ಅದೇ ರಸ್ತೆಯಾಗಿ ಚಲಿಸಿದ್ದೂ ವಿಡಿಯೋದಲ್ಲಿ ದಾಖಲಾಗಿದೆ. ವಲ್ಸದ್​ನಲ್ಲಿ ಶನಿವಾರ 36 ಡಿಗ್ರಿ ಸೆಲ್ಸಿಯಸ್ ತಾಪಮಾನ  ದಾಖಲಾಗಿದ್ದರೆ, ಅಹಮದಾಬಾದಿನಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ದೇಶಾದ್ಯಂತ ತೀವ್ರ ಬಿಸಿಗಾಳಿ ಬೀಸುತ್ತಿರುವ ಕುರಿತು ಮಾಹಿತಿ ಕೇಳಿ ಬರುತ್ತಿದ್ದು, ಶನಿವಾರ ಉತ್ತರ  ಪ್ರದೇಶದ ಬಲಿಯಾ ಪ್ರಾಂತ್ಯದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಚುರು ಮತ್ತು ಶ್ರೀಗಣಗಂಗಾನಗರದಲ್ಲಿ 49.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com