ಉ.ಪ್ರ ಚುನಾವಣೆ: ದಲಿತ-ಮುಸ್ಲಿಂ ಸೂತ್ರ ಪ್ರಯೋಗಿಸಲಿದ್ದಾರೆಯೇ ಮಾಯಾವತಿ?

2017 ರ ವಿಧಾನಸಭಾ ಚುನಾವಣೆಗಾಗಿ ಉತ್ತರ ಪ್ರದೇಶದ ಬಹುಜನ ಸಮಾಜವಾದಿ ಪಕ್ಷ ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದು ಮಾಯಾವತಿ ದಲಿತ-ಮುಸ್ಲಿಂ ಸಮೀಕರಣವನ್ನು ಪ್ರಯೋಗಿಸಲು ಚಿಂತನೆ
ಮಾಯಾವತಿ
ಮಾಯಾವತಿ
Updated on: 

ಲಖನೌ: 2017 ರ ವಿಧಾನಸಭಾ ಚುನಾವಣೆಗಾಗಿ ಉತ್ತರ ಪ್ರದೇಶದ ಬಹುಜನ ಸಮಾಜವಾದಿ ಪಕ್ಷ ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದು, ಈ ಬಾರಿ ಬಿಎಸ್ ಪಿ ನಾಯಕಿ ಮಾಯಾವತಿ ದಲಿತ-ಮುಸ್ಲಿಂ ಸಮೀಕರಣವನ್ನು ಪ್ರಯೋಗಿಸಲು ಚಿಂತನೆ ನಡೆಸಿದ್ದಾರೆ.

ಇದಕ್ಕೆ ಪೂರಕವಾದ ಘಟನೆ ಬುದ್ಧ ಪೂರ್ಣಿಮೆಯಂದು ನಡೆದಿದ್ದು, ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಬೌದ್ಧ ಧರ್ಮಕ್ಕೆಮತಾಂತರಗೊಂಡಿರುವ ದಲಿತರೊಂದಿಗೆ ಭಾಗವಹಿಸುವಂತೆ ಬಿಎಸ್ ಪಿ ಪಕ್ಷದ ಮುಸ್ಲಿಂ ಮುಖಂಡ ನಸೀಮುದ್ದೀನ್ ಸಿದ್ಧಿಕಿ ಅವರಿಗೆ ಮಾಯಾವತಿ ಸೂಚನೆ ನೀಡಿದ್ದರು. ಅದರಂತೆ ಸಿದ್ದಿಕಿ ಸಹ ಬುದ್ಧಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಈ ಬೆಳವಣಿಗೆಯನ್ನು ವಿಧಾನಸಭಾ ಚುನಾವಣೆಗೆ ತಳುಕು ಹಾಕಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಪಿ ನಾಯಕಿ ಮಾಯಾವತಿ ದಲಿತ- ಮುಸ್ಲಿಂ ಸಮೀಕರಣವನ್ನು ಪ್ರಯೋಗಿಸಲಿದ್ದಾರೆ ಎಂದು ವಿಶ್ಲೇಷಿಸಿದೆ.

ಬಿಎಸ್ ಪಿಯ ಲಖನೌ ಮುಖಂದ ಸಿದ್ಧಿಕಿ ಅವರು ಬುದ್ಧ ಪೂರ್ಣಿಮೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಖಚಿತಪಡಿಸಿದ್ದು ಇದು ಪಕ್ಷದ ಕಾರ್ಯಕ್ರಮ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ದಲಿತರು ಭಾಗವಹಿಸಿದ್ದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಸ್ಲಿಂ ಮುಖಂಡರೊಬ್ಬರನ್ನು ಭಾಗವಹಿಸಲು ಕಳಿಸಿರುವುದು ಚುನಾವಣಾ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ ಎಂದು ಬಿಎಸ್ ಪಿ ಮುಖಂಡರು ಹೇಳಿದ್ದಾರೆ.   

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com