ಹಿಜ್‌ಬುಲ್‌ ಮುಜಾಯಿದ್ದೀನ್‌ ಸಂಘಟನೆಯ ಕಮಾಂಡರ್‌ನ ಆಪ್ತ ಸೇನೆಗೆ ಶರಣು

ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಹಿಜ್‌ಬುಲ್‌ ಮುಜಾಯಿದ್ದೀನ್‌ ಉಗ್ರ ಸಂಘಟನೆಯ ಕಮಾಂಡರ್‌...
ತಾರಿಕ್‌ ಪಂಡಿತ್‌
ತಾರಿಕ್‌ ಪಂಡಿತ್‌
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಹಿಜ್‌ಬುಲ್‌ ಮುಜಾಯಿದ್ದೀನ್‌ ಉಗ್ರ ಸಂಘಟನೆಯ ಕಮಾಂಡರ್‌ ನ ಪ್ರಮುಖ ಆಪ್ತನೊಬ್ಬ ಸೇನಾಪಡೆಗಳ ಎದುರು ಶರಣಾಗಿದ್ದಾನೆ. 
ಸೇನಾಪಡೆಗಳ ಮುಂದೆ ಶರಣಾಗಿರುವ ಉಗ್ರ ತಾರಿಕ್‌ ಪಂಡಿತ್‌ ಎಂದು ಗುರುತಿಸಲಾಗಿದ್ದು, ಈತ ಹಿಜ್‌ಬುಲ್‌ ಮುಜಾಯಿದ್ದೀನ್‌ ಸಂಘಟನೆಯ ಕಮಾಂಡರ್‌ ಬುರ್‌ಹಾನ್‌ ವಾನಿಯ ಆಪ್ತ ಎಂದು ಎಎನ್ಐ ವರದಿ ಮಾಡಿದೆ.
ಕಾಶ್ಮೀರ ಕಣಿವೆಯ ಪುಲ್ವಾಮಾದ ಹಳ್ಳಿಯೊಂದರಲ್ಲಿ ಸೇನಾ ಪಡೆಗಳ ಮುಂದೆ ತಾರಿಕ್‌ ಪಂಡಿತ್‌ ಶರಣಾಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com