ಉತ್ತರ ಪ್ರದೇಶ ಗ್ರಾಮಸ್ಥರಿಂದ ಹಿಲರಿ ಕ್ಲಿಂಟನ್ ಗೆಲುವಿಗೆ ಪ್ರಾರ್ಥನೆ

ಉತ್ತರ ಪ್ರದೇಶದ ಜಾಬೂರೌಳಿ ಗ್ರಾಮದ ಜನತೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಜಯಗಳಿಸಬೇಕು ಎಂದು ಪ್ರಾರ್ಥಿಸಿ ವಿಶೇಷ ಹೋಮ ...
ಹಿಲರಿ ಕ್ಲಿಂಟನ್
ಹಿಲರಿ ಕ್ಲಿಂಟನ್
Updated on

ಲಕ್ನೋ: ಉತ್ತರ ಪ್ರದೇಶದ ಜಾಬೂರೌಳಿ ಗ್ರಾಮದ ಜನತೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ  ಹಿಲರಿ ಕ್ಲಿಂಟನ್ ಜಯಗಳಿಸಬೇಕು ಎಂದು ಪ್ರಾರ್ಥಿಸಿ ವಿಶೇಷ ಹೋಮ ಹವನ ನಡೆಸಿದ್ದಾರೆ.

ಕ್ಲಿಂಟನ್ ಫೌಂಡೇಶನ್ ಈ ಗ್ರಾಮವನ್ನು ದತ್ತು ತೆಗೆದುಕೊಂಡು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ನೆರವೇರಿಸಿದೆ. ಹೀಗಾಗಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂದು ಹಿಲರಿ ಭಾವಚಿತ್ರವಿಟ್ಟು ಹೋಮ ಹವನ ನಡೆಸಿದ್ದಾರೆ.

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಹಿಲರಿ ಕ್ಲಿಂಟನ್ ನವೆಂಬರ್ 8 ರಂದು ನಡೆಯುವ ಚುನಾವಣೆಯಲ್ಲಿ ಜಯಗಳಿಸಬೇಕೆಂದು ಪವಿತ್ರ ಹೋಮ ಹವನ- ಪೂಜೆ ನೆರವೇರಿಸಿದ್ದಾರೆ.

20 ಕೋಟಿ ಜನ ಅಮೆರಿಕಾದ ಭವಿಷ್ಯ ನಿರ್ಧರಿಸಲಿದ್ದಾರೆ. ಮೂರುವರೆ ಕೋಟಿ ಜನ ಈಗಾಗಲೇ ತಮ್ಮ ಮತ ಚಲಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com