ರಾಂಚಿಯ ಹೊರವಲ ಬೆರೊ ಎಂಬಲ್ಲಿ ಪೆಟ್ರೋಲ್ ಬಂಕ್ ಮಾಲಿಕ ನಂದ ಕಿಶೋರ್ ಎಂಬಾತನನ್ನು ಕಳೆದ ರಾತ್ರಿ ಬಂಧಿಸಲಾಗಿದೆ. ಆತ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿಯಿಡಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸರು ಹಿಡಿದಿದ್ದಾರೆ. ನಂತರ ಪೊಲೀಸರು ವಿಚಾರಣೆ ನಡೆಸಿದಾಗ ಆ ಹಣ ನಿಷೇಧಿತ ಮಾವೋವಾದಿ ಆರ್ಗನೈಸೇಶನ್ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ(ಪಿಎಲ್ಎಫ್ಐ)ಯ ಮುಖ್ಯಸ್ಥ ದಿನೇಶ್ ಗೊಪೆಯದ್ದು ಎಂದು ತಿಳಿದುಬಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಿಂದ ಬಂದ ಹಣವೆಂದು ಬ್ಯಾಂಕಿನಲ್ಲಿ ಠೇವಣಿಯಿಡುವಂತೆ ಕಿಶೋರ್ ಗೆ ಆತ ಸೂಚಿಸಿದ್ದ.