ನೋಟು ನಿಷೇಧ: ಜನ್ ಧನ್ ಖಾತೆಗಳಲ್ಲಿ ಒಟ್ಟು 21 ಸಾವಿರ ಕೋಟಿ ರೂ. ಜಮಾ

ಕೇಂದ್ರ ಸರ್ಕಾರ 500, 1000 ರೂ ನೋಟುಗಳ ನಿಷೇಧ ನಿರ್ಧಾರವನ್ನು ಪ್ರಕಟಿಸಿದ ನಂತರ ಈ ವರೆಗೂ ಜನ್ ಧನ್ ಖಾತೆಗಳಲ್ಲಿ ಒಟ್ಟು 21,000 ಕೋಟಿ ರೂಪಾಯಿ ಜಮಾ ಆಗಿದೆ.
ನೋಟು ನಿಷೇಧ, ಜನ್ ಧನ್ ಖಾತೆಗಳಲ್ಲಿ ಒಟ್ಟು 21 ಸಾವಿರ ಕೋಟಿ ಜಮಾ
ನೋಟು ನಿಷೇಧ, ಜನ್ ಧನ್ ಖಾತೆಗಳಲ್ಲಿ ಒಟ್ಟು 21 ಸಾವಿರ ಕೋಟಿ ಜಮಾ
Updated on: 
ನವದೆಹಲಿ: ಕೇಂದ್ರ ಸರ್ಕಾರ 500, 1000 ರೂ ನೋಟುಗಳ ನಿಷೇಧ ನಿರ್ಧಾರವನ್ನು ಪ್ರಕಟಿಸಿದ ನಂತರ ಈ ವರೆಗೂ ಜನ್ ಧನ್ ಖಾತೆಗಳಲ್ಲಿ ಒಟ್ಟು 21,000 ಕೋಟಿ ರೂಪಾಯಿ ಜಮಾ ಆಗಿದೆ. 
ಕಪ್ಪುಹಣವನ್ನು ಸಕ್ರಮಗೊಳಿಸಿಕೊಳ್ಳಲು ಕಾಳಧನಿಕರು ಜನ್ ಧನ್ ಖಾತೆಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಖಾತೆಗಳಲ್ಲಿ ನಡೆಯುತ್ತಿರುವ ವಹಿವಾಟುಗಳ ಮೇಲೆ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ನಿಗಾ ವಹಿಸಿವೆ. ಆದರೂ ಸಹ ಈ ವರೆಗೂ ಜನ್ ಧನ್ ಖಾತೆಯಲ್ಲಿ 21,000 ಕೋಟಿ ರೂಪಾಯಿ ಜಮಾ ಆಗಿದೆ. 
ಪಶ್ಚಿಮ ಬಂಗಾಳದಲ್ಲಿರುವ ಜನ್ ಧನ್ ಖಾತೆಗಳಲ್ಲಿ ಅತಿ ಹೆಚ್ಚು ಮೊತ್ತದ ಹಣ ಜಮಾ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಜನ್ ಧನ್ ಯೋಜನೆಯಡಿ ಒಟ್ಟು 24 ಕೋಟಿ ಬ್ಯಾಂಕ್ ಖಾತೆಗಳು ಪ್ರಾರಂಭವಾಗಿದ್ದು, ಜನ್ ಧನ್ ಖಾತೆಯಲ್ಲಿ ಏಕಾಏಕಿ ಬೃಹತ್ ಪ್ರಮಾಣದ ಹಣಕಾಸಿನ ಜಮಾ, ವಹಿವಾಟು ನಡೆದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಜನ್ ಧನ್ ಖಾತೆಗಳ ಮೇಲೆ ನಿಗಾ ವಹಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com