ದೇಶ

ರ್ಯಾಲಿ ವೇಳೆ ಪ್ರಧಾನಿ ಮೋದಿ ಹೊಗಳಿದ ಬಿಎಸ್‌ಪಿ ಮುಖಂಡನಿಂದ ಮೈಕ್ ಕಿತ್ತುಕೊಂಡ ಕಾರ್ಯಕರ್ತ

ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಇತ್ತೀಚೆಗಷ್ಟೇ ನೋಟು ನಿಷೇಧ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಇದೀಗ...

ರ್ಯಾಲಿ ವೇಳೆ ಪ್ರಧಾನಿ ಮೋದಿ ಹೊಗಳಿದ ಬಿಎಸ್‌ಪಿ ಮುಖಂಡನಿಂದ ಮೈಕ್ ಕಿತ್ತುಕೊಂಡ ಕಾರ್ಯಕರ್ತ
ಬಿಎಸ್ಪಿ ಮುಖಂಡ
Published On :
ಲಖನೌ: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಇತ್ತೀಚೆಗಷ್ಟೇ ನೋಟು ನಿಷೇಧ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಇದೀಗ ಅವರದ್ದೇ ಪಕ್ಷದ ಹಿರಿಯ ಮುಖಂಡರೊಬ್ಬರು ಬಿಎಸ್ಪಿ ಪಕ್ಷದ ರ್ಯಾಲಿ ವೇಳೆ ಪ್ರಧಾನಿ ಮೋದಿರನ್ನು ಹಾಡಿ ಹೋಗಳಿರುವ ಈ ವಿಡಿಯೋ ಇದೀಗ ವೈರಲ್ ಆಗಿದೆ. 
ಬಿಎಸ್ಪಿ ಕಾರ್ಯಕರ್ತರ ರ್ಯಾಲಿ ವೇಳೆ ಮಾತನಾಡಿದ ಬಿಎಸ್ಪಿ ಮುಖಂಡರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ಆಗ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ಸೇನೆಯಿಂದ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದರು. ಇದೀಗ 500-1000 ರುಪಾಯಿ ನೋಟುಗಳ ನಿಷೇಧದ ಮೂಲಕ ದೇಶದಲ್ಲಿ ಭ್ರಷ್ಟರ ವಿರುದ್ಧ ಎರಡನೇ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ಕೊಂಡಾಡಿದರು. 
ಮೋದಿ ಅವರನ್ನು ಹೊಗಳುತ್ತಿದ್ದ ವೇಳೆ ಕಾರ್ಯಕರ್ತನೊಬ್ಬ ಮುಖಂಡರ ಬಳಿಯಿಂದ ಮೈಕ್ ಕಸಿದುಕೊಳ್ಳಲು ಪದೇ ಪದೇ ಯತ್ನಿಸಿದರು ಮೈಕ್ ಬಿಡದ ಮುಖಂಡರು ಮೋದಿ ಅವರನ್ನು ಶ್ಲಾಘಿಸಿದರು. ಕೊನೆಗೆ ಕಾರ್ಯಕರ್ತ ಮುಖಂಡರಿಂದ ಮೈಕ್ ಕಿತ್ತುಕೊಂಡು ಮುಖಂಡರ ಭಾಷಣೆಗೆ ಅಂತ್ಯ ಹಾಡಿದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.