

ಆಗ್ರಾ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದ್ಯುತ್ ಅವಘಡದಿಂದ ಪಾರಾದ ಸ್ವಲ್ಪದರಲ್ಲೇ ಬಚಾವಾಗಿದ್ದಾರೆ.
ಉತ್ತರಪ್ರದೇಶದ ಚುನಾವಣಾ ಮೆರವಣಿಗೆಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿದ್ದರು. ಸಾನ್ ಮಹಾಯಾತ್ರಾ ಅಂಗವಾಗಿ ಆಗ್ರಾಗೆ ಆಗಮಿಸಿದ್ದ ರಾಹುಲ್, ಮಹಾರಾಜ್ ಅಗ್ರಸೇನ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ವೇಳೆ ಅಲ್ಲಿಯೇ ಹಾದುಹೋಗಿದ್ದ ವಿದ್ಯುತ್ ತಂತಿಯೊಂದು ರಾಹುಲ್ ತಲೆಗೆ ತಾಗಿದೆ. ಈ ವೇಳೆ ದಿಢೀರನೆ ರಾಹುಲ್ ಹಿಂದಕ್ಕೆ ಸರಿದಿದ್ದಾರೆ. ಬಳಿಕ ಅಲ್ಲೇ ಇದ್ದ ಭದ್ರತಾ ಸಿಬ್ಬಂದಿ ಕೆಳಗೆ ಬೀಳಬಹುದಾಗಿದ್ದ ರಾಹುಲ್ ಗಾಂಧಿಯನ್ನು ರಕ್ಷಿಸಿದ್ದಾರೆ.
ತಲೆಗೆ ವಿದ್ಯುತ್ ತಂತಿ ತಗುಲಿದ ತಕ್ಷಣ ರಾಹುಲ್ ಗಾಂಧಿ ಗಾಬರಿಯಿಂದ ತಲೆ ಮುಟ್ಟಿಕೊಂಡಿದ್ದಾರೆ. ಈ ವೇಳೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರಾಜ್ ಬಬ್ಬರ್ ರಾಹುಲ್ ಗಾಂಧಿಗೆ ಆರ್ ಯು ಓಕೆ ಎಂದು ಕೇಳಿದ್ದಾರೆ. ಕಳೆದ ವಾರ ಸೀತಾಪುರ್ ನಲ್ಲಿ ವ್ಯಕ್ತಿಯೊಬ್ಬ ರಾಹುಲ್ ಗಾಂಧಿ ಮೇಲೆ ಶೂ ಎಸೆದಿದ್ದು ಭಾರೀ ಸುದ್ದಿಯಾಗಿತ್ತು.