ರಾಜ್ಯಸಭಾಗೆ 'ದ್ರೌಪದಿ' ಖ್ಯಾತಿಯ ರೂಪಾ ಗಂಗೂಲಿ ನಾಮನಿರ್ದೇಶನ

ಬಿಜೆಪಿಯಿಂದ ರಾಜ್ಯಸಭಾ ಸದಸ್ಯತ್ವ ಸ್ಥಾನ ಪಡೆದಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ರಾಜಿನಾಮೆಯಿಂದ ತೆರವುಗೊಂಡಿದ್ದ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ...
ರೂಪಾ ಗಂಗೂಲಿ
ರೂಪಾ ಗಂಗೂಲಿ
Updated on: 
ನವದೆಹಲಿ: ಬಿಜೆಪಿಯಿಂದ ರಾಜ್ಯಸಭಾ ಸದಸ್ಯತ್ವ ಸ್ಥಾನ ಪಡೆದಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ರಾಜಿನಾಮೆಯಿಂದ ತೆರವುಗೊಂಡಿದ್ದ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ ಮಹಾಭಾರತ ಟಿವಿ ಸರಣಿಯಲ್ಲಿ ದ್ರೌಪದಿ ಪಾತ್ರದಾರಿ ನಟಿ ರೂಪಾ ಗಂಗೂಲಿ ಅವರನ್ನು ನಾಮನಿರ್ದೇಶನ ಮಾಡಿದೆ. 
ರೂಪಾ ಗಂಗೂಲಿ ಅವರು 1988ರಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತ ಟಿವಿ ಸರಣಿಯಲ್ಲಿ ದ್ರೌಪದಿ ಪಾತ್ರದ ಮೂಲಕ ಮನೆ ಮಾತಾಗಿದ್ದರು. ಬಂಗಾಳಿಯಾಗಿರುವ ರೂಪಾ, ಹಿಮ್ಮೇಳ ಗಾಯಕಿ ಮತ್ತು ರಾಜಕಾರಣಿಯೂ ಆಗಿದ್ದಾರೆ. 
2015ರಲ್ಲಿ ಬಿಜೆಪಿ ಸೇರಿದ್ದ ರೂಪಾ ಗಂಗೂಲಿ ಪಶ್ಚಿಮಬಂಗಾಳ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿ ಲಕ್ಷ್ಮಿ ರತನ್ ಶುಕ್ಲಾ ವಿರುದ್ಧ ಸೋತ್ತಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com