ಪ್ರೀತಿ ಫಜೀತಿ: ಮದುವೆಯಾಗು ಎಂದು ಪೀಡಿಸುತ್ತಿದ್ದ ಪ್ರೇಯಸಿಗೆ ಪ್ರಿಯಕರ ಮಾಡಿದ್ದೇನು ಗೊತ್ತೇ?

ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ 25 ವರ್ಷದ ಮಹಿಳೆಯನ್ನು ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನ ಕೆಳಗೆ ತಳ್ಳಿ ಪರಾರಿಯಾಗಿರುವ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ವಿಜಿನಗರಂ: ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ 25 ವರ್ಷದ ಮಹಿಳೆಯನ್ನು ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನ ಕೆಳಗೆ ತಳ್ಳಿ ಪರಾರಿಯಾಗಿರುವ ಘಟನೆ  ಆಂಧ್ರಪ್ರದೇಶದ ವಿಜಿನಗರಂ ಜಿಲ್ಲೆಯ ಚೀಪುರುಪಲ್ಲೇಯಲ್ಲಿ ನಡೆದಿದೆ.

ವೆಲಾಗವಸಾಲ ಗ್ರಾಮದ ನೀಲವೇಣಿ ಮತ್ತು ರಾಮಕೃಷ್ಣ ಪರಸ್ಪರ ಪ್ರೀತಿಸುತ್ತಿದ್ದರು. ಆರ್ಕೆಸ್ಟ್ರಾ ನಡೆಸುತ್ತಿದ್ದ ರಾಮಕೃಷ್ಣ ಗ್ರೂಪ್ ಗೆ 2012 ರಲ್ಲಿ ನೀಲವೇಣಿ ಸಿಂಗರ್ ಹಾಕಿ ಸೇರಿಕೊಂಡಿದ್ದಾಳೆ, ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಕೆಲ ದಿನಗಳ ಬಳಿಕ ರಾಮಕೃಷ್ಣನನ್ನು ಮದುವೆಯಾಗುವಂತೆ ನೀಲವೇಣಿ ಒತ್ತಾಯಿಸಿದ್ದಾಳೆ. ಹಲವು ಕಾರಣ ನೀಡಿ ರಾಮಕೃಷ್ಣ ಮದುವೆ ಪ್ರಸ್ತಾಪ ತಳ್ಳಿ ಹಾಕಿದ್ದಾನೆ. ಇತ್ತೀಚೆಗೆ ರಾಮಕೃಷ್ಣನನ್ನು ಮನೆಗೆ ಕರೆದುಕೊಂಡು ಬಂದ ನೀಲವೇಣಿ ತನ್ನ ಪೋಷಕರಿಗೆ ಆತನನ್ನು ಪರಿಚಯಿಸಿದ್ದಾಳೆ. ಇದಾದ ನಂತರ ಆತ ನೀಲವೇಣಿಯನ್ನು ಆವಾಯ್ಡ್ ಮಾಡಿದ್ದಾನೆ.

ಭಾನುವಾರ ಯುವತಿ ಆತನ ಸ್ಥಳಕ್ಕೆ ಹೋಗಿ ಆತನನ್ನು ಕರೆದು ಕೊಂಡು ಸ್ಥಳೀಯ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದಾಳೆ. ತನನ್ನು ವಿವಾಹವಾಗುವಂತೆ ಮತ್ತೆ ಒತ್ತಾಯ ಮಾಡಿದ್ದಾಳೆ, ತಮ್ಮ ಪೋಷಕರು 10 ಲಕ್ಷ ರೂ ವರದಕ್ಷಿಣೆ ನಿರೀಕ್ಷೆ ಮಾಡುತ್ತಿದ್ದಾರೆ ಎಂದು  ಆತ ಹೇಳಿದ್ದಾನೆ, ಇಬ್ಬರ ನಡುವೆ ವಾಗ್ದಾದ ತಾರಕ್ಕೇರಿದೆ. ವಿವಾಹವಾಗದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಕೆ ಬೆದರಿಕೆ ಹಾಕಿದ್ದಾಳೆ.ಇದನ್ನೆ ಅಸ್ತ್ರವನ್ನಾಗಿಸಿಕೊಂಡ ರಾಮಕೃಷ್ಣ ಸೋಮವಾರ ಮುಂಜಾನೆ ಚಲಿಸುತ್ತಿದ್ದ ರೈಲಿನ ಮುಂಭಾಗದಿಂದ ಆಕೆಯನ್ನು ಕೆಳಗೆ ತಳ್ಳಿ ಪರಾರಿಯಾಗಿದ್ದಾನೆ. ಅದೃಷ್ಟ ವಶಾತ್ ನೀಲವೇಣಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ, ಆದರೆ ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com