ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಕರೆಂಟ್ ಶಾಕ್: 5 ಸಾವು

ಕಳೆದ ಶುಕ್ರವಾರ ಸಂಜೆ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಕರೆಂಟ್ ಶಾಕ್ ಹೊಡೆದು ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜೈಪುರದಲ್ಲಿ ಸಂಭವಿಸಿದೆ...
ವಿದ್ಯುತ್ ಶಾಕ್
ವಿದ್ಯುತ್ ಶಾಕ್

ಜೈಪುರ: ಕಳೆದ ಶುಕ್ರವಾರ ಸಂಜೆ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಕರೆಂಟ್ ಶಾಕ್ ಹೊಡೆದು ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜೈಪುರದಲ್ಲಿ ಸಂಭವಿಸಿದೆ.

ಜೈಪುರ ಹೊರವಲಯದಲ್ಲಿರುವ ಫಾರ್ಮ್ ಹೌಸ್ ನಲ್ಲಿ ಹುಟ್ಟುಹಬ್ಬದ ಆಚರಣೆ ನಡೆಯುತ್ತಿತ್ತು. ಈ ವೇಳೆ ಕೆಟರಿಂಗ್ ಮಾಡುವ ಸಿಬ್ಬಂದಿ ಆಕಸ್ಮಿಕವಾಗಿ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದು ಈ ಅನಾಹುತ ಸಂಭವಿಸಲು ಕಾರಣವಾಗಿದೆ.

ಕರೆಂಟ್ ಶಾಕ್ ನಲ್ಲಿ ಕೆಟರಿಂಗ್ ಐವರು ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com