ನವದೆಹಲಿ: ದೀಪಾವಳಿ ಹಬ್ಬ ಮುಗಿಯುತ್ತಾ ಬಂದಿದೆ. ಪಟಾಕಿ ಸಪ್ಪಳದ ನಂತರ ಅದರಿಂದಾಗಿ ಉಂಟಾದ ವಾಯುಮಾಲಿನ್ಯ, ಶಬ್ದ ಮಾಲಿನ್ಯ ದ ಮಾತು ಪ್ರತಿವರ್ಷ ಕೇಳಿಬರುತ್ತದೆ. ಈ ವರ್ಷ ಮಾಲಿನ್ಯ ಮಟ್ಟ ನಿಗದಿಗಿಂತ 42ರಷ್ಟು ಸಲ ಹೆಚ್ಚು ಇದೆಯಂತೆ.
ಅದರಲ್ಲೂ ದೇಶದ ರಾಜಧಾನಿ ದೆಹಲಿಯಲ್ಲಿ ಎಲ್ಲ ಕಡೆಗಿಂತ ಮಾಲಿನ್ಯ ಜಾಸ್ತಿಯಾಗಿರುತ್ತದೆ.
ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸಮಿತಿಯ ಗುಣಮಟ್ಟ ದಾಖಲೆಗಳ ಪ್ರಕಾರ, ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನೋಡಿದಾಗ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ 42 ಪಟ್ಟು ಜಾಸ್ತಿಯಾಗಿತ್ತು. ಅದರಲ್ಲೂ ನಗರದ ಆನಂದ ವಿಹಾರ್, ಪಂಜಾಬಿ ಬಾಗ್ ನಲ್ಲಿ ಮಾಲಿನ್ಯದ ಮಟ್ಟ ಇನ್ನಷ್ಟು ಜಾಸ್ತಿಯಾಗಿದೆ.
ವಾಯುಮಾಲಿನ್ಯದಿಂದ ಅನೇಕ ಕಾಯಿಲೆಗಳು ಜನರಲ್ಲಿ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.