ಕೇಂದ್ರ ಸರ್ಕಾರದ ಉದ್ದೇಶಿತ ಅಣೆಕಟ್ಟು ಸುರಕ್ಷತಾ ಮಸೂದೆ- ಪ್ರಧಾನಿಗೆ ನಿಂದನೆ ರೀತಿಯಲ್ಲಿ ಪತ್ರ ಬರೆದ ಜಯಲಲಿತಾ

ಕೇಂದ್ರ ಸರ್ಕಾರದ ಕರಡು ಅಣೆಕಟ್ಟು ಸುರಕ್ಷತಾ ಮಸೂದೆ-2016 ತಮಿಳು ನಾಡಿನ ಮುಲ್ಲೈಪೆರಿಯರ್ ಅಣೆಕಟ್ಟಿನ ಹಕ್ಕನ್ನು ...
ಮುಖ್ಯಮಂತ್ರಿ ಜೆ.ಜಯಲಲಿತಾ(ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಜೆ.ಜಯಲಲಿತಾ(ಸಂಗ್ರಹ ಚಿತ್ರ)
Updated on: 
ಚೆನ್ನೈ: ಕೇಂದ್ರ ಸರ್ಕಾರದ ಕರಡು ಅಣೆಕಟ್ಟು ಸುರಕ್ಷತಾ ಮಸೂದೆ-2016 ತಮಿಳು ನಾಡಿನ ಮುಲ್ಲೈಪೆರಿಯರ್ ಅಣೆಕಟ್ಟಿನ ಹಕ್ಕನ್ನು ಕಸಿಯುವ ಸಾಧ್ಯತೆಯಿದ್ದು, ರಾಜಕೀಯದಲ್ಲಿ ಅನಗತ್ಯ ಪ್ರವೇಶ ಮಾಡದಂತೆ ಮತ್ತು ಸಂವಿಧಾನದ ಚೌಕಟ್ಟಿನ ಮೇಲೆ ಸವಾರಿ ಮಾಡದಂತೆ ಮುಖ್ಯಮಂತ್ರಿ ಜೆ.ಜಯಲಲಿತಾ ಪ್ರಧಾನ ಮಂತ್ರಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಧಾನಿಗೆ ಬರೆದ ನಿಂದನೆಯ ಪತ್ರದಲ್ಲಿ ಅವರು ಕೇಂದ್ರದ ಉದ್ದೇಶಿತ ಮಸೂದೆಯನ್ನು ಕಟುವಾಗಿ ಟೀಕಿಸಿದ್ದಾರೆ. ಪತ್ರದಲ್ಲಿ ಜಯಲಲಿತಾ, ಅಂದಿನ ಯುಪಿಎ ಸರ್ಕಾರ 2010ರಲ್ಲಿ ಲೋಕಸಭೆಯಲ್ಲಿ ಮಂಡಿಸಿದ ಮಸೂದೆಯನ್ನು ಪರಿಗಣಿಸಿ ಇಂದಿನ ಕರಡು ಮಸೂದೆಯನ್ನು ತಯಾರಿಸಲಾಗಿದೆ. ರಾಜ್ಯದ ಅಣೆಕಟ್ಟುಗಳ ಸುರಕ್ಷತೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳದ್ದು. ಅಣೆಕಟ್ಟುಗಳನ್ನು ಯಾರು ನೋಡಿಕೊಳ್ಳುತ್ತಾರೆ, ಯಾರ ಮಾಲಿಕತ್ವದಲ್ಲಿದೆ ಎಂಬುದು ಮುಖ್ಯವಲ್ಲ ಎಂದು ಹೇಳಿದ್ದಾರೆ.
ಅಣೆಕಟ್ಟುಗಳ ನಿಯಮ ಮತ್ತು ಸುರಕ್ಷತಗಳನ್ನು ನೋಡಿಕೊಳ್ಳಲು ಸರಿಯಾದ ತಜ್ಞರು ಮತ್ತು ಅನುಭವ ಹೊಂದಿರುವವರು ಇರುವುದರಿಂದ ಕೇಂದ್ರ ಸರ್ಕಾರದ ಕಾನೂನಿನ ಅವಶ್ಯಕತೆಯಿಲ್ಲ ಎಂದು ಖಾರವಾಗಿ ಪತ್ರದಲ್ಲಿ ಬರೆದಿದ್ದಾರೆ.
ಹೀಗಾಗಿ ಜಲ ಸಂಪನ್ಮೂಲ ಸಚಿವರಿಗೆ ಅಣೆಕಟ್ಟು ಸುರಕ್ಷತಾ ಮಸೂದೆ ಜಾರಿಗೆ ತರುವ ಅವಶ್ಯಕತೆಯನ್ನು ಪುನರ್ ಪರಿಶೀಲಿಸುವಂತೆ ಮತ್ತು ತಮಿಳು ನಾಡಿನ ಸಮಸ್ಯೆಯನ್ನು ಬಗೆಹರಿಸುವ ಮುನ್ನ ಆತುರವಾಗಿ ಮುಂದುವರಿಯುವುದು ಬೇಡವೆಂದು ನಿರ್ದೇಶನ ನೀಡಬೇಕೆಂದು ಜಯಲಲಿತಾ ಪ್ರಧಾನಿಯವರನ್ನು ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಈ ವಿಭಾಗದ ಇತರ ಸುದ್ದಿ

No stories found.

X
Kannada Prabha
www.kannadaprabha.com