

ನವದೆಹಲಿ: ಬೃಹತ್ ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿಗಳು ತನ್ನಿಂದ ಐದು ಲಕ್ಷ ರೂ. ಲಂಚ ಕೇಳಿ ತನಗೆ ಕಿರುಕುಳ ನೀಡಿದ್ದಾರೆ ಎಂದು ನಟ ಕಪಿಲ್ ಶರ್ಮಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿ ಆರೋಪಿಸಿ ವಿವಾದ ಸೃಷ್ಟಿಸಿದ್ದರು.
ಕಳೆದ 5 ವರ್ಷಗಳಿಂದ ನಾನು ಹದಿನೈದು ಕೋಟಿ ರೂ. ಆದಾಯ ತೆರಿಗೆ ಪಾವತಿಸಿದ್ದೇನೆ. ಆದರೂ ಬೃಹನ್ ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್ ನನ್ನಿಂದ ಐದು ಲಕ್ಷ ರೂ. ಲಂಚ ಕೇಳಿದೆ. ಎಂದು ಕಪಿಲ್ ಶರ್ಮಾ, ಮೋದಿಗೆ ಮಾಡಿದ್ದ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದರು.
ಈ ಮಧ್ಯೆ ಯೂಟ್ಯೂಬ್ ಸಾಮಾಜಿಕ ಜಾಲ ತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು ಇದರಲ್ಲಿ ಈ ದೇಶದಲ್ಲಿ ಸಣ್ಣ ಪುಟ್ಟ ಕಾರಣಗಳಿಗೂ ಪ್ರಧಾನಿಯನ್ನೇ ಗುರಿ ಇರಿಸಿ ವಾಗ್ದಾಳಿ ಮಾಡಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ. ಆಗಸ್ಟ್ 6ರಂದು ನಡೆಸಿ ಕೊಟ್ಟಿದ್ದ ಟೌನ್‌ಹಾಲ್ ಸಂವಾದ ಕಾರ್ಯಕ್ರಮದಲ್ಲಿ ಈ ಮಾತನ್ನು ಹೇಳಿದ್ದರು.