ಬಿಜೆಪಿ ಬಲಿಷ್ಠ ರಾಷ್ಟ್ರೀಯ ಪಕ್ಷವಾಗಲಿದೆ; ರಾಹುಲ್ ಗಾಂಧಿ ರಾಜಕೀಯದಿಂದ ನಿವೃತ್ತಿ ಪಡೆಯಲಿ: ರಾಮಚಂದ್ರ ಗುಹಾ ಸಲಹೆ

ರಾಹುಲ್ ಗಾಂಧಿ ಆದಷ್ಟು ಬೇಗ ರಾಜಕೀಯದಿಂದ ನಿವೃತ್ತಿ ಪಡೆದು ವಿವಾಹವಾಗಲಿ ಎಂದು ಖ್ಯಾತ ಇತಿಹಾಸಕಾರ ಮತ್ತು ಲೇಖಕ ರಾಮಚಂದ್ರ ಗುಹಾ ಹೇಳಿದ್ದಾರೆ.
ರಾಮಚಂದ್ರ ಗುಹಾ-ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ರಾಮಚಂದ್ರ ಗುಹಾ-ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
Updated on: 

ನವದೆಹಲಿ: ರಾಹುಲ್ ಗಾಂಧಿ ಆದಷ್ಟು ಬೇಗ ರಾಜಕೀಯದಿಂದ ನಿವೃತ್ತಿ ಪಡೆದು ವಿವಾಹವಾಗಲಿ ಎಂದು ಖ್ಯಾತ ಇತಿಹಾಸಕಾರ ಮತ್ತು ಲೇಖಕ ರಾಮಚಂದ್ರ ಗುಹಾ ಹೇಳಿದ್ದಾರೆ. ಎಕನಾಮಿಕ್ ಟೈಮ್ಸ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಾಮಚಂದ್ರ ಗುಹಾ,  ಕಾಂಗ್ರೆಸ್ ಪಕ್ಷ ಇನ್ನು ಸಹ ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಪ್ರಭಾವ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹಲವಾರು ಅಭಿಪ್ರಾಯಪಡುತ್ತಿದ್ದಾರೆ ಆದರೆ ನನ್ನ ಪ್ರಕಾರ ಮುಂದಿನ 15-20 ವರ್ಷಗಳಲ್ಲಿ ಬಿಜೆಪಿ ಏಕೈಕ ಹಾಗೂ ಅತಿ ಬಲಿಷ್ಠ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದ್ದಾರೆ.

ಬಿಜೆಪಿ ತನ್ನ ಸಿದ್ಧಾಂತದ ಹೊರತಾಗಿ, ಭಾರತೀಯ ರಾಜಕೀಯದ ವಿಚಾರವಾಗಿ 1960-70 ರ ದಶಕದಲ್ಲಿ ಕಾಂಗ್ರೆಸ್ ಪಡೆದಿದ್ದ ಸ್ಥಾನ, ಬಲಿಷ್ಠತೆಯನ್ನು ಪಡೆಯಲಿದೆ. 1950 ರ ದಶಕದಿಂದ ಕೇರಳ, ತಮಿಳುನಾಡು, ಪಂಜಾಬ್ ನಲ್ಲಿ ಕಮ್ಯುನಿಷ್ಟರು ಎಐಎಡಿಎಂಕೆ, ಸೇರಿದಂತೆ ಪ್ರಾದೇಶಿಕ ರಾಜಕೀಯ ಪಕ್ಷಗಳು ತಲೆ ಎತ್ತಿದರೂ ರಾಷ್ಟ್ರೀಯ ಪಕ್ಷಗಳಲ್ಲಿ ಕಾಂಗ್ರೆಸ್ ಗೆ ಸರಿ ಸಾಟಿಯಾದ ಪಕ್ಷ ಇರಲಿಲ್ಲ. ಅಂತೆಯೇ ಬಿಜೆಪಿ ಸಹ ಇನ್ನು 15-20 ವರ್ಷಗಳಲ್ಲಿ ಏಕೈಕ ಬಲಿಷ್ಠ  ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಲಿದ್ದು, ಪರ್ಯಾಯ ಇರುವ ಸಾಧ್ಯತೆ ಕಡಿಮೆ ಇದೆ, ಆದ್ದರಿಂದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜಕೀಯದಿಂದ ನಿವೃತ್ತಿ ಪಡೆದು ವಿವಾಹವಾಗುವುದು ಒಳಿತು ಎಂದು ರಾಮಚಂದ್ರ ಗುಹಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com