ಭಗತ್ ಸಿಂಗ್ ಅವರ 109ನೇ ಜನ್ಮ ದಿನಾಚರಣೆ: ಪ್ರಧಾನಿಯಿಂದ ಗೌರವಾರ್ಪಣೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಭಗತ್ ಸಿಂಗ್ ಅವರ 109ನೇ ಜನ್ಮ ದಿನಾಚರಣೆ...
ಭಗತ್ ಸಿಂಗ್ ಚಿತ್ರ
ಭಗತ್ ಸಿಂಗ್ ಚಿತ್ರ
Updated on: 
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಭಗತ್ ಸಿಂಗ್ ಅವರ 109ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಗೌರವ ನಮನ ಸಲ್ಲಿಸಿದರು.
''ಧೈರ್ಯಶಾಲಿ ಶಹೀದ್ ಭಗತ್ ಸಿಂಗ್ ಅವರಿಗೆ ತಲೆಬಾಗುತ್ತೇನೆ. ತಮ್ಮ ಧೈರ್ಯ ಹೋರಾಟಗಳಿಂದ ಭಾರತದ ಇತಿಹಾಸದಲ್ಲಿ ಅಳಿಸಲಾಗದ ಚುಕ್ಕೆ ಬಿಟ್ಟು ಹೋಗಿದ್ದಾರೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ ಜಿಲ್ಲೆಯ ಬಾಂಗಾ ಗ್ರಾಮದಲ್ಲಿ 1907ರಲ್ಲಿ ಜನಿಸಿದರು.
ಅವರನ್ನು 1931, ಮಾರ್ಚ್ 23ರಂದು ಹರಿ ರಾಜಗುರು ಮತ್ತು ಸುಖದೇವ್ ತಾಪರ್ ಅವರೊಂದಿಗೆ 23ನೇ ವರ್ಷದಲ್ಲಿ ಲಾಹೋರ್ ಜೈಲಿನಲ್ಲಿ ನೇಣಿಗೇರಿಸಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com