ಸ್ವೀಡನ್ ದಾಳಿಗೆ ಶೋಕ ವ್ಯಕ್ತಪಡಿಸುವ ಮೋದಿಗೆ ದೇಶದಲ್ಲಾಗುವ ದಾಳಿಗಳು ಕಾಣುವುದಿಲ್ಲವೇ: ಲಾಲು ಪ್ರಸಾದ್

ವಿದೇಶಗಳಲ್ಲಿ ಆಗುವ ದಾಳಿಗಳಿಗೆ ಶೋಕ ವ್ಯಕ್ತಪಡಿಸುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ತಾಯ್ನಾಡಿನಲ್ಲಿ ಆಗುತ್ತಿರುವ ದಾಳಿಗಳು ಕಣ್ಣಿಗೆ ಕಾಣುತ್ತಿಲ್ಲವೇ ಎಂದು...
ನರೇಂದ್ರ ಮೋದಿ-ಲಾಲು ಪ್ರಸಾದ್
ನರೇಂದ್ರ ಮೋದಿ-ಲಾಲು ಪ್ರಸಾದ್
Updated on: 
ನವದೆಹಲಿ: ವಿದೇಶಗಳಲ್ಲಿ ಆಗುವ ದಾಳಿಗಳಿಗೆ ಶೋಕ ವ್ಯಕ್ತಪಡಿಸುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ತಾಯ್ನಾಡಿನಲ್ಲಿ ಆಗುತ್ತಿರುವ ದಾಳಿಗಳು ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಟೀಕಿಸಿದ್ದಾರೆ. 
ಜಾನುವಾರು ವ್ಯಾಪಾರಿಯೊಬ್ಬನನ್ನು ರಾಜಸ್ತಾನದ ಅಲ್ವಾರದಲ್ಲಿ ಗೋರಕ್ಷಕರು ದಾಳಿ ಮಾಡಿದ್ದು ಈ ದಾಳಿಯಲ್ಲಿ ಆತ ಮೃತಪಟ್ಟಿದ್ದರು. ಈ ಬಗ್ಗೆ ಪ್ರಧಾನಿ ಮೌನ ವಹಿಸಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. 
ಸ್ವೀಡನ್ ನಲ್ಲಾದ ಟ್ರಕ್ ದಾಳಿಯನ್ನು ಖಂಡಿಸುವ ಪ್ರಧಾನಿ ಮೋದಿಗೆ ದೇಶದಲ್ಲಿ ಅದೇ ರೀತಿ ಭಾರತಾಂಬೆಯ ಪುತ್ರರ ವಿರುದ್ಧ ಬಲಪಂಥೀಯ ಭಯೋತ್ಪಾದಕರು ನಡೆಸುತ್ತಿರುವ ದಾಳಿಗಳನ್ನು ಖಂಡಿಸಿ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com