ಜಾರ್ಖಂಡ್: 2 ಪೊಲೀಸರನ್ನು ಹತ್ಯೆ ಮಾಡಿದ ಮಾವೊವಾದಿಗಳು

ಜಾರ್ಖಂಡ್ ನ ಸಿಮ್ದೇಗಾ ಜಿಲ್ಲೆಯಲ್ಲಿ ಮಾವೊವಾದಿಗಳು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ.
ಜಾರ್ಖಂಡ್
ಜಾರ್ಖಂಡ್
ರಾಂಚಿ: ಜಾರ್ಖಂಡ್ ನ ಸಿಮ್ದೇಗಾ ಜಿಲ್ಲೆಯಲ್ಲಿ ಮಾವೊವಾದಿಗಳು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ. 
ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ ಬನೊ ಪೊಲೀಸ್ ಠಾಣೆಯ ಉಸ್ತುವಾರಿ ವಿದ್ಯಾಪತಿ ಸಿಂಗ್ ಹಾಗೂ ಪೇದೆ ತರುಣ್ ಬುರಾಲಿ ಇಬ್ಬರೂ ಹುತಾತ್ಮರಾಗಿದ್ದಾರೆ. ಗಸ್ತು ತಿರುಗುತ್ತಿದ್ದ ವೇಳೆಯಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಮಾವೊವಾದಿಗಳು ದಾಳಿ ನಡೆಸಿದ್ದಾರೆ, ಈ ವೇಳೆ ಪೊಲೀಸರು ಹಾಗೂ ಮಾವೊವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com