ಕುಲಭೂಷಣ್‌ ಜಾದವ್‌ ರಕ್ಷಣೆಗೆ ಅಗತ್ಯವಿರುವ ಎಲ್ಲವನ್ನೂ ಸರ್ಕಾರ ಮಾಡಲಿದೆ: ರಾಜನಾಥ್ ಸಿಂಗ್

ಕುಲ್’ಭೂಷಣ್ ಯಾದವ್ ರಕ್ಷಣೆಗೆ ಸಾಧ್ಯವಿರುವ ಎಲ್ಲವನ್ನೂ ಸರ್ಕಾರ ಮಾಡಲಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
Updated on: 
ನವದೆಹಲಿ: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲ್’ಭೂಷಣ್ ಯಾದವ್ ವಿಚಾರವಾಗಿ ಲೋಕಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಕುಲ್’ಭೂಷಣ್ ಯಾದವ್ ರಕ್ಷಣೆಗೆ ಸಾಧ್ಯವಿರುವ ಎಲ್ಲವನ್ನೂ ಸರ್ಕಾರ ಮಾಡಲಿದೆ ಎಂದು ಹೇಳಿದ್ದಾರೆ. 
ಪಾಕಿಸ್ತಾನ ಕುಲ್’ಭೂಷಣ್ ಯಾದವ್ ಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ರಾಜನಾಥ್ ಸಿಂಗ್, ಪಾಕಿಸ್ತಾನ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಿರಪರಾಧಿಯೊಬ್ಬನಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಕುಲ್ ಭೂಷಣ್ ಯಾದವ್ ಅವರನ್ನು ಬಂಧಿಸಿದಾಗ ಅವರಿಗೆ ದೂತಾವಾಸ ಕಚೇರಿಯನ್ನು ಸಂಪರ್ಕಿಸುವ, ಪ್ರವೇಶಿಸುವ ಅವಕಾಶವನ್ನೂ ನೀಡಿರಲಿಲ್ಲ. ಬಂಧಿತ ಕುಲ್ ಭೂಷಣ್ ಯಾದವ್ ಅವರಿಗೆ ದೂತವಾಸ ಕಚೇರಿಯ ಸಂಪರ್ಕ ಕಲ್ಪಿಸುವಂತೆ ಭಾರತ 13 ಬಾರಿ ಕೇಳಿದ್ದರೂ ಸಹ ಅವಕಾಶ ನೀಡದೇ ಜಿನೇವಾ ಒಪ್ಪಂದವನ್ನು ಉಲ್ಲಂಘಿಸಿದೆ. 
ಕುಲಭೂಷಣ್ ಜಾಧವ್ ಅವರನ್ನು ಭಾರತ ಮಾಜಿ ಯೋಧ ಎಂದು ಹೇಳುತ್ತಿದೆ. ಅವರು ಭಾರತದ ಪರ ಬೇಹುಗಾರರಲ್ಲ. ಜಾಧವ್ ಚಾಬಹಾರ್ ನಲ್ಲಿರುವ ಓರ್ವ ಸಾಮಾನ್ಯ ವ್ಯಾಪಾರಿ. ಪಾಕಿಸ್ತಾನದ ಭದ್ರತಾ ಸಿಬ್ಬಂದಿಗಳು ಅವರನ್ನು ಕಿಡ್ನ್ಯಾಪ್ ಮಾಡಿ ಭಾರತದ ಪರ ಬೇಹುಗಾರಿಕೆ ನಡೆಸುತ್ತಿದ್ದರೆಂದು ಹೇಳುತ್ತಿದೆ. ಆದರೆ ಕುಲಭೂಷಣ್ ಯಾದವ್ ನಿರಪರಾಧಿಯಾಗಿದ್ದು, ಅವರಿಗೆ ಖಂಡಿತಾ ನ್ಯಾಯ ಸಿಗಲಿದೆ ಎಂದು ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com