ಸ್ವಾತಂತ್ರ್ಯ ನಂತರ ಭಾರತದಲ್ಲಿ ಮೋದಿ ಅತಿ ಹೆಚ್ಚು ಜನಪ್ರಿಯತೆ ಪಡೆದ ನಾಯಕ

ಸ್ವಾತಂತ್ರ್ಯ ನಂತರ ಭಾರತ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅತಿ ಹೆಚ್ಚಿನ ಜನಪ್ರಿಯತೆ ಪಡೆದ ನಾಯಕ ಎಂದು...
ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 
ನವದೆಹಲಿ: ಸ್ವಾತಂತ್ರ್ಯ ನಂತರ ಭಾರತ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅತಿ ಹೆಚ್ಚಿನ ಜನಪ್ರಿಯತೆ ಪಡೆದ ನಾಯಕ ಎಂದು ಎನ್ ಡಿಎ ಘೋಷಿಸಿದೆ.
ಇತ್ತೀಚೆಗೆ ನಡೆದ ಪಂಚರಾಜ್ಯ ವಿಧಾನಸಭೆ ಚುನಾವಣೆಗಳ ಫಲಿತಾಂಶದ ನಂತರ ಮೋದಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ ಎಂದು ತಿಳಿಸಿದೆ.
ಶಿವಸೇನೆ ಸೇರಿ ಎನ್ ಡಿಎ ಮೈತ್ರಿ ಕೂಟದ 32 ಮೈತ್ರಿ ಪಕ್ಷಗಳು ಈ ನಿರ್ಣಯವನ್ನು ಒಪ್ಪಿಕೊಂಡಿವೆ. ನಿನ್ನೆ ನಡೆದ ಎನ್ ಡಿಎ ಮೈತ್ರಿ ಕೂಟದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಮೋದಿ ಅವರ ಈ ಜನಪ್ರಿಯತೆಯಿಂದ 2019ರ ಲೋಕಸಭೆ ಚುನಾವಣೆ ಯಲ್ಲೂ ಎನಿ ಡಿ ಎ ಮೈತ್ರಿ ಕೂಟ ಜಯ ಸಾಧಿಸುತ್ತದೆ. ವಿಧಾನ ಸಭೆ ಚುನಾವಣೆ ಫಲಿತಾಂಶ 2019ರ ಲೋಕಸಭೆಗ ಚುನಾವಣೆಗೆ ಮುನ್ನುಡಿಯಾಗಲಿದೆ ಎಂದು ನಿರ್ಣಯ ಹೇಳಿದೆ.
ಹಿಂದಿನ ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿತ್ತು, ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಯ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com