ಶ್ರೀನಗರ: ಲೋಕಸಭಾ ಕ್ಷೇತ್ರ ಚುನಾವಣೆ ಬಳಿಕ ಮತ್ತೆ ಇಂಟರ್ನೆಟ್ ಸೇವೆ ಪುನರಾರಂಭ

ಶ್ರೀನಗರ ಲೋಕಸಭಾ ಕ್ಷೇತ್ರ ಚುನಾವಣೆ ಬಳಿಕ ಕಾಶ್ಮೀರದಲ್ಲಿ ಮತ್ತೆ ಇಂಟರ್ನೆಟ್ ಸೇವೆ ಪುನರಾರಂಭಿಸಲಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಶ್ರೀನಗರ: ಶ್ರೀನಗರ ಲೋಕಸಭಾ ಕ್ಷೇತ್ರ ಚುನಾವಣೆ ಬಳಿಕ ಕಾಶ್ಮೀರದಲ್ಲಿ ಮತ್ತೆ ಇಂಟರ್ನೆಟ್ ಸೇವೆ ಪುನರಾರಂಭಿಸಲಾಗಿದೆ. 
ಚುನಾವಣೆ ಅಂತ್ಯಗೊಳ್ಳುತ್ತಿದ್ದಂತೆಯೇ ನಿನ್ನೆ ಸಂಜೆಯಿಂದಲೇ ಬ್ರಾಡ್ ಬ್ಯಾಂಡ್ ಹಾಗೂ ಮೊಬೈಲ್ ಸೇವೆಗಳನ್ನು ಪುನರಾರಂಭಿಸಲಾಗಿದೆ. ದ್ಗಾಮ್ ಜಿಲ್ಲೆಯ 38 ಮತ ಕ್ಷೇತ್ರಗಳಲ್ಲಿ ಶಾಂತಿಯುತ ವಾತಾವರಣ ಕಂಡು ಬಂದ ಹಿನ್ನಲೆಯಲ್ಲಿ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಕಳೆದ ಭಾನುವಾರ ಶ್ರೀನಗರದ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯನ್ನು ನಡೆಸಲಾಗಿತ್ತು. ಈ ವೇಳೆ ಸಾಕಷ್ಟು ಹಿಂಸಾಚಾರಗಳು ನಡೆದಿದ್ದವು. ನಂತರ ಮರು ಮತದಾನವನ್ನು ನಡೆಸಲಾಗಿತ್ತು. 
ಚುನಾವಣೆ ಹಿನ್ನಲೆಯಲ್ಲಿ ಯಾವುದ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದ ಅಧಿಕಾರಿಗಳು ಏಪ್ರಿಲ್ 8 ರ ರಾತ್ರಿಯಿಂದಲೇ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದರು. ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದರು, ಚುನಾವಣೆ ವೇಳೆ ಹಿಂಸಾಚಾರ ಸೃಷ್ಟಿಯಾಗಿದ್ದವು. ಪರಿಣಾಮ ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com