ಕಾಶ್ಮೀರ ಪರಿಸ್ಥಿತಿ ಕುರಿತಂತೆ ಅಜಿತ್ ದೋವಲ್ ಜತೆ ಬಿಪಿನ್ ರಾವತ್ ಚರ್ಚೆ

ಕಾಶ್ಮೀರ ಗಲಭೆ ಕುರಿತಂತೆ ಸೇನಾ ಮುಖ್ಯ ಜನರಲ್ ಬಿಪಿನ್ ರಾವತ್ ಅವರು ರಾಷ್ಟ್ರೀಯ ಭದ್ರತಾ ಸಹಲಗಾರ ಅಜಿತ್ ದೋವಲ್ ರನ್ನು ಭೇಟಿ ಮಾತುಕತೆ ನಡೆಸಿದ್ದಾರೆ...
ಬಿಪಿನ್ ರಾವತ್
ಬಿಪಿನ್ ರಾವತ್
Updated on: 
ನವದೆಹಲಿ: ಕಾಶ್ಮೀರ ಗಲಭೆ ಕುರಿತಂತೆ ಸೇನಾ ಮುಖ್ಯ ಜನರಲ್ ಬಿಪಿನ್ ರಾವತ್ ಅವರು ರಾಷ್ಟ್ರೀಯ ಭದ್ರತಾ ಸಹಲಗಾರ ಅಜಿತ್ ದೋವಲ್ ರನ್ನು ಭೇಟಿ ಮಾತುಕತೆ ನಡೆಸಿದ್ದಾರೆ. 
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ಅವರನ್ನು ಬಿಪಿನ್ ರಾವತ್ ಅವರು ಭೇಟಿ ಮಾಡಿ ಚರ್ಚಿಸಿದ ನಂತರ ಇದೀಗ ಅಜಿತ್ ದೋವಲ್ ರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. 
ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎನ್.ಎನ್ ವೊಹ್ರಾರ ಅವರು ಬಿಪಿನ್ ರಾವತ್ ಅವರಿಗೆ ಕಾಶ್ಮೀರ ಪರಿಸ್ಥಿತಿಯ ಕುರಿತು ಮಾಹಿತಿಯನ್ನು ನೀಡಿದರು. ಇನ್ನು ನಿನ್ನೆಯಷ್ಟೇ ಉಗ್ರರು ಶ್ರೀನಗರದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ ಬಷಿರ್ ಅಹಮದ್ ದಾರ್ ಮನೆಗೆ ನುಗ್ಗಿ ಆತನ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com