ಬಿಹಾರದಲ್ಲಿ ಹಳಿ ತಪ್ಪಿದ ಸಹರ್ಸ-ಪಾಟ್ನಾ ರಾಜ್ಯರಾಣಿ ಎಕ್ಸ್ ಪ್ರೆಸ್ ರೈಲು!

ಬಿಹಾರದ ಸಹರ್ಸ ಬಳಿ ಸಹರ್ಸ-ಪಾಟ್ನಾ ರಾಜ್ಯರಾಣಿ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು, ಸುಮಾರು 3 ಗಂಟೆಗಳ ಕಾಲ ಈ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಪಾಟ್ನಾ: ಬಿಹಾರದ ಸಹರ್ಸ ಬಳಿ ಸಹರ್ಸ-ಪಾಟ್ನಾ ರಾಜ್ಯರಾಣಿ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು, ಸುಮಾರು 3 ಗಂಟೆಗಳ ಕಾಲ ಈ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು.

ಬೆಳಗ್ಗೆ ಸುಮಾರು 9.30ಕ್ಕೆ ಸಹರ್ಸ ರೈಲು ನಿಲ್ದಾಣದಿಂದ ಪಾಟ್ನಾದತ್ತ ಹೊರಟಿದ್ದ ರೈಲು, ರೈಲ್ವೇ ನಿಲ್ದಾಣ ಬಿಡುತ್ತಿದ್ದಂತೆಯೇ ಹಳಿ ತಪ್ಪಿದೆ. ರೈಲಿನ 2 ಬೋಗಿಗಳು ಹಳಿ ತಪ್ಪಿದ್ದು, ತಾಂತ್ರಿಕ ಕಾರಣದಿಂದಾಗಿ ರೈಲು ಹಳಿ ತಪ್ಪಿದೆ  ಎಂದು ಅಧಿಕಾಗಿಳು ಹೇಳುತ್ತಿದ್ದಾರೆ. ಕೂಡಲೇ ಸ್ಥಳದಲ್ಲೇ ಇದ್ದ ರೈಲ್ವೇ ಅಧಿಕಾರಿಗಳು ಘಟನೆಯನ್ನು ಪರಿಶೀಲಿಸುತ್ತಿದ್ದು, ಹಳಿ ಸರಿ ಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ರೈಲು ಹಳಿ ತಪ್ಪಿದ ಕಾರಣ ಸಹರ್ಸ-ಮಾನ್ಸಿ, ಸಹರ್ಸ-ಮಾಧೇಪುರ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತವಾಗಿದ್ದು, ರೈಲ್ವೇ ಸಿಬ್ಬಂದಿ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ. ಅಧಿಕಾರಿಗಳು ನೀಡಿರುವ ಮಾಹಿತಿಯಂತೆ 2 ಬೋಗಿಗಳು  ಹಳಿ ತಪ್ಪಿವೆಯಾದರೂ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಅಂತೆಯೇ ಉಳಿದ ಬೇರಾವುದೇ ಕೋಚ್ ಗಳಿಗೂ ಧಕ್ಕೆಯಾಗಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com