ಟ್ವಿಟರ್ ನಲ್ಲಿ ಆಜಾನ್ ರೆಕಾರ್ಡ್ ನ್ನು ಪೋಸ್ಟ್ ಮಾಡಿದ ಸೋನು ನಿಗಮ್!

ಮುಸ್ಲಿಮರ ಬೆಳಗಿನ ಪ್ರಾರ್ಥನೆ ಆಜಾನ್ ನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದ ಸೋನು ನಿಗಮ್ ಈಗ ಮತ್ತೊಮ್ಮೆ ಆಜಾನ್ ಕುರಿತ ಟ್ವೀಟ್ ಮಾಡಿದ್ದಾರೆ.
ಸೋನು ನಿಗಮ್
ಸೋನು ನಿಗಮ್
ನವದೆಹಲಿ: ಮುಸ್ಲಿಮರ ಬೆಳಗಿನ ಪ್ರಾರ್ಥನೆ ಆಜಾನ್ ನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದ ಸೋನು ನಿಗಮ್ ಈಗ ಮತ್ತೊಮ್ಮೆ ಆಜಾನ್ ಕುರಿತ ಟ್ವೀಟ್ ಮಾಡಿದ್ದಾರೆ. 
ಈ ಬಾರಿ ಆಜಾನ್ ನ ರೆಕಾರ್ಡಿಂಗ್ ಇರುವ ವಿಡಿಯೋವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಸೋನು ನಿಗಮ್, ಏನನ್ನೂ ಹೇಳದೇ ಶುಭ ಮುಂಜಾನೆ ಭಾರತ (ಗುಡ್ ಮಾರ್ನಿಂಗ್ ಇಂಡಿಯಾ) ಎಂದು ಹೇಳಿದ್ದಾರೆ. ಕಳೆದ ವಾರ ಆಜಾನ್ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿದ್ದ ಬಾಲಿವುಡ್ ಗಾಯಕ ಸೋನು ನಿಗಮ್ ನಾನು ಮುಸ್ಲಿಮನಲ್ಲ ಆದರೂ ಬೆಳಗ್ಗೆ ಆಜಾನ್ ನಿಂದಾಗಿ ಏಳುವಂತಾಗಿದೆ. ನಮ್ಮ ದೇಶದಲ್ಲಿ ಈ ಬಲವಂತದ ಧಾರ್ಮಿಕತೆ ಎಂದು ಕೊನೆಯಾಗುತ್ತದೆ. ನಾನು ಏಕೆ ಕರ್ಕಶ ಧ್ವನಿ ಕೇಳಬೇಕು ಎಂದು ಪ್ರಶ್ನಿಸಿದ್ದರು. 
ಸೋನು ನಿಗಮ್ ಅವರ ಈ ಟ್ವೀಟ್ ಬಗ್ಗೆ ಸಾಕಷ್ಟು ಚರ್ಚೆಯಾಗಿದ್ದವು. ಈಗ ಏನನ್ನೂ ಹೇಳದೇ ಕೇವಲ ಆಜಾನ್ ನ ರೆಕಾರ್ಡಿಂಗ್ ಇರುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com