ದೇಶ

ಸೈಬರ್ ದೋಷ: ಚೀನಾ ನಿರ್ಮಿತ ಡ್ರೋನ್ ಬಳಸದಂತೆ ಸಿಬ್ಬಂದಿಗಳಿಗೆ ಅಮೆರಿಕ ಸೇನೆ ಸೂಚನೆ

ಸೈಬರ್ ದೋಷ: ಚೀನಾ ನಿರ್ಮಿತ ಡ್ರೋನ್ ಬಳಸದಂತೆ ಸಿಬ್ಬಂದಿಗಳಿಗೆ ಅಮೆರಿಕ ಸೇನೆ ಸೂಚನೆ
ಡಿಜೆಐ ಡ್ರೋಣ್
Published On :
ನ್ಯೂಯಾರ್ಕ್: ಚೀನಾ ನಿರ್ಮಿತ ಡ್ರೋಣ್ ಗಳನ್ನು ಬಳಕೆ ಮಾಡದಂತೆ ಅಮೆರಿಕ ಸೇನೆ ಆದೇಶ ನೀಡಿದೆ. ಸೇನೆ ಬಳಕೆ ಮಾಡುತ್ತಿರುವ ಡ್ರೋಣ್ ಗಳಲ್ಲಿ ಸೈಬರ್ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಮೆರಿಕ ಸೇನೆ ಚೀನಾ ನಿರ್ಮಿತ ಡ್ರೋಣ್ ಗಳನ್ನು ಬಳಕೆ ಮಾಡದಂತೆ ಆದೇಶ ನೀಡಿದೆ. 
ಚೀನಾದ ಡ್ರೋಣ್ ಉತ್ಪಾದಕ ಎಸ್ ಜೆ ಡಿಜೆಐ ಟೆಕ್ನಾಲಜಿ ಕೋ ನಿರ್ಮಿತ ಡ್ರೋಣ್ ಗಳಲ್ಲಿ ಸೈಬರ್ ಸಮಸ್ಯೆ ಎದುರಾಗಿದ್ದು, ತಕ್ಷಣವೇ ಎಲ್ಲಾ ಡಿಜೆಐ ಅಪ್ಲಿಕೇಷನ್ಸ್ ಅನ್ನು ಅನ್ ಇನ್ಸ್ಟಾಲ್ ಮಾಡಿ, ಬ್ಯಾಟರಿ/ ಸ್ಟೋರೇಜ್ ಮೀಡಿಯಾಗಳನ್ನು ತೆಗೆದುಹಾಕುವಂತೆ ಅಮೆರಿಕ ಸೇನೆ ತನ್ನ ಸಿಬ್ಬಂದಿಗೆ ಆದೇಶ ನೀಡಿದೆ. 
ಡಿಜೆಐ ಡ್ರೋಣ್ ಗಳನ್ನು ಅಮೆರಿಕ ಸೇನೆ ವ್ಯಾಪಕವಾಗಿ ಬಳಕೆ ಮಾಡುತ್ತಿದ್ದು, ಡಿಜೆಐ ತನ್ನ ಡ್ರೋಣ್ ಗಳಲ್ಲಿ ಸೈಬರ್ ಸಮಸ್ಯೆ ಕಾಣಿಸಿಕೊಂಡಿದೆ ಎಂಬ ಅಮೆರಿಕ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿದ್ದು, ಬಳಕೆ ಮಾಡದಂತೆ ಆದೇಶ ನೀಡುವಾಗ ನಮ್ಮೊಂದಿಗೆ ಚರ್ಚಿಸಿಲ್ಲ ಎಂದು ಅಸಮಾಧಾನವನ್ನೂ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೇ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಪೆಂಟಗನ್ ನೊಂದಿಗೆ ಕಾರ್ಯನಿರ್ವಹಿಸಲು ಸಿದ್ಧವಿದ್ದೇವೆ ಎಂದೂ ಹೇಳಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.