ಆಂಬ್ಯುಲೆನ್ಸ್ ನ ಮಾರ್ಗ ಮಧ್ಯೆ ತಡೆದ ಬಿಜೆಪಿ ನಾಯಕ, ರೋಗಿ ಸಾವು: ಕೇಸು ದಾಖಲು

ದಾರಿ ಮಧ್ಯೆ ಆಂಬ್ಯುಲೆನ್ಸ್ ನ್ನು ಸ್ಥಗಿತಗೊಳಿಸಿ ರೋಗಿ ಸಾವಿಗೆ ಕಾರಣರಾದ ಹರ್ಯಾಣದ ಬಿಜೆಪಿ ಮುಖಂಡ...
ಆಂಬ್ಯುಲೆನ್ಸ್
ಆಂಬ್ಯುಲೆನ್ಸ್
Updated on: 
ಫತೇಹಬಾದ್( ಹರ್ಯಾಣ): ದಾರಿ ಮಧ್ಯೆ ಆಂಬ್ಯುಲೆನ್ಸ್ ನ್ನು ಸ್ಥಗಿತಗೊಳಿಸಿ ರೋಗಿ ಸಾವಿಗೆ ಕಾರಣರಾದ ಹರ್ಯಾಣದ ಬಿಜೆಪಿ ಮುಖಂಡ ದರ್ಶನ್ ನಾಗ್ಪಾಲ್  ವಿರುದ್ಧ ಕೇಸು ದಾಖಲಾಗಿದೆ.
ಹರ್ಯಾಣದ ಫತೇಹಾಬಾದ್ ಜಿಲ್ಲೆಯಲ್ಲಿ ಮೊನ್ನೆ 5ರಂದು ಆಂಬ್ಯುಲೆನ್ಸ್ ವಾಹನ ತನ್ನ ವಾಹನದ ಡಿಕ್ಕಿ ಹೊಡೆಯಿತು ಎಂದು ಆರೋಪಿಸಿ ಆಂಬ್ಯುಲೆನ್ಸ್ ನ್ನು ಅಡ್ಡಗಟ್ಟಿ ಸುಮಾರು ಅರ್ಧ ಗಂಟೆ ವಾಗ್ವಾದ ನಡೆಸಿದರು. ಇದರಿಂದ ಆಂಬ್ಯುಲೆನ್ಸ್ ನಲ್ಲಿದ್ದ ರೋಗಿ ಮೃತಪಟ್ಟಿದ್ದರು. 42 ವರ್ಷದ ರೋಗಿ ನವೀನ್ ಸೋನಿ ಆಸ್ಪತ್ರೆಗೆ ತಡವಾಗಿ ತಲುಪಿದ್ದರಿಂದ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದರು.
ತನ್ನ ವಾಹನಕ್ಕೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ ನ್ನು ದರ್ಶನ್ ನಾಗ್ಪಾಲ್  ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿ  ಅರ್ಧ ಗಂಟೆ ಹೋಗದಂತೆ ತಡೆದು ನಿಲ್ಲಿಸಿದರು ಎಂದು ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ. ಪರಿಹಾರ ನೀಡುವಂತೆ ಒತ್ತಾಯಿಸಿದ ದರ್ಶನ್ ನಂತರ ನಾವು ಬೇಡಿಕೊಂಡಾಗ ಬಿಟ್ಟರು ಎಂದು ರೋಗಿಯ ಕಡೆಯವರು ಘಟನೆ ಬಗ್ಗೆ ವಿವರಿಸಿದ್ದಾರೆ.
ಆದರೆ ಈ ಆರೋಪವನ್ನು ದರ್ಶನ್ ನಾಗ್ಪಾಲ್ ನಿರಾಕರಿಸಿದ್ದಾರೆ.ತಾವು ಆಂಬ್ಯುಲೆನ್ಸ್ ನ್ನು ತಡೆದು ನಿಲ್ಲಿಸಲಿಲ್ಲ ಎಂದಿದ್ದಾರೆ.
ಪೊಲೀಸರು ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com