ತಾಜ್ ಮಹಲ್ ಒಂದು ಸಮಾಧಿನಾ ಅಥವಾ ದೇವಸ್ಥಾನವೇ ಎಂಬುದನ್ನು ಸ್ಪಷ್ಟಪಡಿಸಿ: ಸರ್ಕಾರಕ್ಕೆ ಸಿಐಸಿ

ವಿಶ್ವ ವಿಖ್ಯಾತ ತಾಜ್ ಮಹಲ್ ಶಹಜಾಹನ್ ನಿರ್ಮಿಸಿದ ಒಂದು ಸಮಾಧಿಯೋ ಅಥವಾ ರಜಪುತ ರಾಜ ಮೊಘಲರಿಗೆ ಕಾಣಿಕೆಯಾಗಿ ನೀಡಿದ....
ತಾಜ್ ಮಹಲ್
ತಾಜ್ ಮಹಲ್
Updated on: 
ನವದೆಹಲಿ: ವಿಶ್ವ ವಿಖ್ಯಾತ ತಾಜ್ ಮಹಲ್ ಶಹಜಾಹನ್ ನಿರ್ಮಿಸಿದ ಒಂದು ಸಮಾಧಿಯೋ ಅಥವಾ ರಜಪುತ ರಾಜ ಮೊಘಲರಿಗೆ ಕಾಣಿಕೆಯಾಗಿ ನೀಡಿದ ಒಂದು ಶಿವ ದೇವಸ್ಥಾನವೇ ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಕೇಂದ್ರ ಮಾಹಿತಿ ಆಯೋಗ(ಸಿಐಸಿ) ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಸೂಚಿಸಿದೆ.
ಕೆಲವು ಇತಿಹಾಸಕಾರರು ತಾಜ್ ಮಹಲ್ ಒಂದು ಸಮಾಧಿ ಎಂದು ಇನ್ನು ಕೆಲವು ಇತಿಹಾಸಕಾರರು ಶಿವ ದೇವಸ್ಥಾನವೆಂದು ಉಲ್ಲೇಶಿಸಿದ್ದಾರೆ ಮತ್ತು ಹಲವು ನ್ಯಾಯಾಲಯಗಳಲ್ಲೂ ಈ ಪ್ರಕರಣ ವಿಚಾರಣೆಯಲ್ಲಿದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸಲ್ಲಿಸಿದ್ದ ಆರ್ ಟಿಐ ಅರ್ಜಿಯನ್ನು ಸಿಐಸಿ ಕೇಂದ್ರ ಸಂಸ್ಕೃತಿ ಇಲಾಖೆಗೆ ವರ್ಗಾಯಿಸಿದೆ.
ತಾಜ್ ಮಹಲ್ ಒಂದು ಸಮಾಧಿಯೋ ಅಥವಾ ದೇವಸ್ಥಾನವೋ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಪ್ರೇಮ ಸೌಧದ ಕುರಿತ ವಿವಾದಕ್ಕೆ ತೆರೆ ಎಳೆಯಬೇಕು ಎಂದು ಮಾಹಿತಿ ಆಯೋಕ್ತ ಶ್ರೀಧರ್ ಆಚಾರ್ಯಲು ಅವರು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಸೂಚಿಸಿದ್ದಾರೆ. ಅಲ್ಲದೆ ಈ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಸೇರಿದಂತೆ ಇತರೆ ಕೋರ್ಟ್ ಗಳಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ ಕೆಲವು ವಜಾಗೊಂಡಿವೆ. ಇನ್ನು ಕೆಲವು ವಿಚಾರಣೆ ಹಂತದಲ್ಲಿವೆ ಎಂದು ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com